
ಪ್ರಗತಿವಾಹಿನಿ ಸುದ್ದಿ: ಮದುವೆಯಾದ ತಿಂಗಳೊಳಗೆ ನವವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಈ ದುರಂತ ಸಂಭವಿಸಿದೆ. ಐಶ್ವರ್ಯ(26) ಮೃತ ಯುವತಿ. ಮದುವೆಯಾಗಿ ಒಂದು ತಿಂಗಳು ಕಳೆದಿರಲಿಲ್ಲ. ಇದ್ದಕ್ಕಿದ್ದಂತೆ ಐಶ್ವರ್ಯ ಸಾವನ್ನಪ್ಪಿದ್ದು, ಗಂಡನೇ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಐಶ್ವರ್ಯ ಪೋಷಕರು ಆರೋಪಿಸಿದ್ದಾರೆ.
27 ದಿನಗಳ ಹಿಂದಷ್ಟೆ ಲಿಖಿತ್ ಸಿಂಹ ಜೊತೆ ಐಶ್ವರ್ಯ ವಿವಾಹವಾಗಿತ್ತು. ಮೂಲತಃ ನೆಲಮಂಗಲ ನಿವಾಸಿಯಾದ ಐಶ್ವರ್ಯ, ಬಾಗಲಗುಂಟೆಯ ಮಲ್ಲಸಂದ್ರ ನಿವಾಸಿ ಲಿಖಿತ್ ನನ್ನು ವಿವಾಹವಾಗಿದ್ದರು. ಎರಡೂ ಕುಟುಂಬ ನಿಶ್ಚಿಯ ಮಾಡಿಯೇ ಮಾಡಿದ್ದ ವಿವಾಹವಿದಾಗಿತ್ತು. ಮದುವೆಯಾದ ತಿಂಗಳೊಳಗೆ ಪತಿ ಹಾಗೂ ಮನೆಯವರು ಕಿರುಕುಳ ನೀಡಲಾರಂಭಿಸಿದ್ದರು. ನಿನ್ನೆ ಬೆಳಿಗ್ಗೆಯಷ್ಟೇ ಕುಟುಂಬದವರು ರಾಜಿಪಂಚಾಯ್ತಿಯನ್ನೂ ಮಾಡಿದ್ದರಂತೆ ಆದರೀಗ ಐಶ್ವರ್ಯ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಲಿಖಿತ್ ಸಹೋದರ ಐಶ್ವರ್ಯಾ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಪೋಷಕರು ಮನೆಗೆ ಬಂದು ನೋಡುವಷ್ಟರಲ್ಲಿ ರೂಮಿನಲ್ಲಿ ನೇಣುಬಿಗಿದ ಸ್ಥಿತಿಯಲಿ ಮೃತದೇಹ ಪತ್ತೆಯಾಗಿದೆ. ಮನೆಯವರು ಇನ್ನೂ ರೂಮಿನ ಬಾಗಿಲನ್ನೂ ತೆರೆದು ನೋಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪತಿಯೇ ಐಶ್ವರ್ಯಳನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.
ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


