Belagavi NewsBelgaum NewsCrimeKannada NewsKarnataka News

*ಕಾಕತಿ ಪೊಲೀಸ್‌ರಿಂದ ಬೈಕ್ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಒಂದು ಬೈಕ್ ಪತ್ತೆ ಹಚ್ಚಲು ಹೋಗಿ ಓರ್ವ ಕಳ್ಳನಿಂದ 9 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕಳ್ಳತನವಾದ ಬಗ್ಗೆ ನೀಡಿದ ದೂರಿನ ಮೇರೆಗೆ ಕಾಕತಿ ಪೊಲೀಸ್ ಠಾಣೆ ಮೊ. ಸಂ. 257/2025 ಕಲಂ 303(2) ಬಿ.ಎನ್.ಎಸ್ ಆಕ್ಟ್-2023 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಮಾಡಿದ ಕಾಕತಿ ಪೊಲೀಸರು, ಮುಜಿಪ್ ಮಂಜೂರ ಅಹಮ್ಮದ, ಶೇಖ ಎಂಬಾತನನ್ನು ವಶಕ್ಕೆ ಪಡೆದು  ವಿಚಾರಣೆಗೊಳಪಡಿಸಿದಾಗ  9 ಬೈಕ್‌ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. 

ಕಾಕತಿ ಠಾಣಾ-3, ಹಿರೇಬಾಗೇವಾಡಿ ಠಾಣಾ-3, ಮಾಳಮಾರುತಿ ಠಾಣಾ -2, ಮಾರಿಹಾಳ ಠಾಣಾ -1 ಹಾಗೂ ಪುಣಿ ನಗರದಿಂದ 1 ಬೈಕ್ ಕಳ್ಳತನ ಮಾಡಿರುವು ಬೆಳಕಿಗೆ ಬಂದಿದೆ.

ಈ ಕಳ್ಳನಿಂದ ಒಟ್ಟು ರೂ.7,00,000/- ಮೌಲ್ಯದ 10 ಬೈಕ್‌ಗಳನ್ನು ವಶಪಡಿಸಿಕೊಂಡು ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

Home add -Advt

Related Articles

Back to top button