Belagavi NewsBelgaum NewsKannada NewsKarnataka NewsPolitics

*ಅಕ್ರಮ ಮದ್ಯ ಮಾರಾಟ: 2 ಕೋಟಿಗೂ ಅಧಿಕ ದಂಡ ವಸೂಲಿ: ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮ ಮದ್ಯಕ್ಕೆ ಸಂಬಂಧಿಸಿದಂತೆ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದಲ್ಲಿ 9 ತಿಂಗಳಲ್ಲಿ ಒಟ್ಟು 1294 ಪ್ರಕರಣ ದಾಖಲಿಸಿದ ಅಬಕಾರಿ ಇಲಾಖೆ, 2 ಕೋಟಿ 28 ಲಕ್ಷದ ಮದ್ಯ ವಶಕ್ಕೆ ಪಡೆದಿದೆ ಎಂದು ಎಂದು ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಅವರು ಹೇಳಿದರು.

ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 783 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕ್ರಮಕೈಗೊಳ್ಳಲಾಗತ್ತಿದೆ. ಕಳ್ಳಭಟ್ಟಿಗೆ ಸಂಬಂಧಿಸಿದಂತೆ ಬೀಟ್ ಪೊಲೀಸರು ನಿಗಾವಹಿಸುತ್ತಿದ್ದಾರೆ. ಢಾಭಾಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಅಬಕಾರಿ ಕೈಪಿಡಿಯಂತೆ ಪ್ರತಿ ತಿಂಗಳು ಗ್ರಾಮಸಭೆಗಳನ್ನು ನಡೆಸಲಾಗುತ್ತಿದೆ. ಚುನಾವಣೆ ವೇಳೆ ಆರಂಭಸಿದ್ದ ಸಹಾಯವಾಣಿಯನ್ನು ಸಕ್ರಿಯಗೊಳಿಸಲಾಗುವುದು ಎಂದರು.

Home add -Advt

ಇನ್ನು ನಮ್ಮಲ್ಲಿಯೂ ಸಿಬ್ಬಂದಿ ಕೊರತೆಯಿದೆ. ಶೇ.30 ರಷ್ಟು ಪೇದೆಗಳಿದ್ದಾರೆ. ಅವರುಗಳನ್ನೇ ಬಳಸಿ ಕಾರ್ಯನಿರ್ವಹಿಸಲಾಗುತ್ತಿದೆ. ಹೊಸ ವರ್ಷದಾಚರಣೆಯ ವೇಳೆ ಇಂತಿಷ್ಟೇ ಮದ್ಯ ಮಾರಾಟ ಮಾಡಬೇಕೆಂದು ಲೈಸೆನ್ ಹೊಂದಿರುವ ಮಾರಾಟಗಾರರಿಗೆ ಯಾವುದೇ ಟಾರ್ಗೆಟ್ ನೀಡಿಲ್ಲ. ಇನ್ನು ಕುಡಿದು ವಾಹನ ಚಲಾವಣೆ ತಪ್ಪು ಎಂದರು.

ಇನ್ನು ರಾಯಬಾಗನಲ್ಲಿ ಐದು ವರ್ಷದ ಮಗುವಿಗೆ ಮದ್ಯ ಸೇವನೆಗೆ ಬಾರ್‌’ನಲ್ಲಿ ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದರು.

Related Articles

Back to top button