
ಪ್ರಗತಿವಾಹಿನಿ ಸುದ್ದಿ: ದೇಶದ ಅನೇಕ ಭಾಗದಲ್ಲಿ ಶೀತ ಗಾಳಿಗೆ ಜನ ಹೈರಾಣಾಗಿದ್ದಾರೆ. ಜೊತೆಗೆ ಹವಾಮಾನ ವೈಪರಿತ್ಯದ ಪರಿಣಾಮ ರಸ್ತೆಯೇ ಕಾಣದಂತೆ ಹೊಗೆಯಂತೆ ಆವರಿಸಿರುವ ಪರಿಣಾಮ ಹಲವಾರು ವಿಮಾನಗಳ ಹಾರಾಟ ರದ್ದಾಗಿದೆ.
ದಟ್ಟ ಮಂಜಿನ ಕಾರಣಕ್ಕೆ ದೆಹಲಿಯಲ್ಲಿ ವಿಮಾನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಹೆಚ್ಚಾಗಿ ಏನೂ ಕಾಣುತ್ತಿಲ್ಲ. ಆದ್ದರಿಂದ ಬರೋಬ್ಬರಿ 118 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. 16 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿದಿನ 1300 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ದಟ್ಟ ಮಂಜು, ಕಡಿಮೆ ಗೋಚರತೆಯಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. 1300 ವಿಮಾನಗಳ ಪೈಕಿ 118 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. 16 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಕುಸಿದಿದ್ದಕ್ಕೆ ತುರ್ತು ಪರಿಸ್ಥಿತಿ ಹೊರಡಿಸಲಾಗಿದೆ. 6 ರಿಂದ 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯಲಿವೆ. ಕನಿಷ್ಠ 10ರಿಂದ 15 ದಿನಗಳ ಕಾಲ ಶಾಲೆಗಳು ಮುಚ್ಚಲಿವೆ. ಪರಿಸ್ಥಿತಿ ನೋಡಿಕೊಂಡು ಸಿಎಂ ಅತಿಶಿ ನಿರ್ಧಾರ ಕೈಗೊಳ್ಳಲಿದ್ದಾರೆ.
ದಟ್ಟವಾದ ಮಂಜಿನಿಂದಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯ್ತು. ಇದಲ್ಲದೆ, ಉತ್ತರ ಪ್ರದೇಶದಲ್ಲಿ ರೈಲು ಪ್ರಯಾಣಕ್ಕೂ ಅಡಚಣೆಯಾಯ್ತು, ಕೆಲವು ವಿಳಂಬವಾಗಿ ಸಂಚರಿಸುತ್ತಿವೆ.




