
ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿ ಪ್ರೀತಿ ಸಿಗದೇ ಮನನೊಂದ ಬಾಲಕಿಯೊಬ್ಬಳು ಹೊಸ ವರ್ಷದ ಸಂದರ್ಭದಲ್ಲೇ ದುಡ್ಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾನೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲೇಖನಾ (17) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕಿ. ಲೇಖನಾ ತಂದೆ-ತಾಯಿ ಕೌಟುಂಬಿಕ ಕಹಲದಿಂದ ದೀರಾಗಿದ್ದರು. ಹತ್ತನೆ ತರಗತಿ ಓದುತ್ತಿದ್ದ ಲೇಖನಾ ಅನುತ್ತೀರ್ಣಳಾಗಿದ್ದಳು. ಮನೆಯಲ್ಲಿಯೇ ವಾಸವಾಗಿದ್ದಳು. ತಂದೆ ಬೇರೆ ಕಡೆ ವಾಸವಾಗಿದ್ದರೆ, ಲೇಖನಾ ತಾಯಿ ಜೊತೆ ವಾಸವಾಗಿದ್ದಳು.
ಈ ಘಟನೆಗಳಿಂದ ಮನನೊಂದಿದ್ದ ಲೇಖನಾ, ನನಗೆ ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ. ಒಂಟಿ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ. ತಂದೆ-ತಾಯಿ ನಡುವಿನ ಕಲಹ ಮಕ್ಕಳ ಮೇಲೆ ಅದೆಂತಹ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


