
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೀದರ್ ಜಿಲ್ಲೆಯ ಪ್ರತಿಷ್ಠಿತ ವಾಲಿ ಪರಿವಾರದ ವಿವೇಕ ದೀಪಕ್ ವಾಲಿ ಫೌಂಡೇಶನ್ ವತಿಯಿಂದ ಮುದ್ರಣಗೊಳಿಸಿದ 2026ರ ಕ್ಯಾಲೆಂಡರ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
ಯುವ ಉದ್ಯಮಿ ವಿವೇಕ ದೀಪಕ ವಾಲಿ ಅವರು ತಮ್ಮ ಜನ್ಮದಿನದ ಅಂಗವಾಗಿ ಕಳೆದ ಸುಮಾರು 6 ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯ ನಡೆಸುತ್ತ ಬಂದಿದ್ದು, ಇದರ ಭಾಗವಾಗಿ, ಸಂಪೂರ್ಣ ಪಂಚಾಂಗ ಹೊಂದಿರುವ 25 ಸಾವಿರ ದಿನದರ್ಶಿಕೆಗಳನ್ನು ಮುದ್ರಿಸಿ ಹೊನ್ನಿಕೇರಿ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಸಮರ್ಪಣೆ ಮಾಡುವ ಮೂಲಕ
ವಿವೇಕ ದೀಪಕ ವಾಲಿ ಫೌಂಡೇಶನ್ ವತಿಯಿಂದ ಮುದ್ರಣಗೊಳಿಸಿದ ಕ್ಯಾಲೆಂಡರ್ ಗಳನ್ನು, ಬಡವರು, ಸಾರ್ವಜನಿಕರು, ಅಂಗಡಿ ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.




