Belagavi NewsBelgaum NewsKannada NewsKarnataka NewsLatestNationalPolitics

*ವಿಶೇಷ ತರಬೇತಿಗಳಿಗೆ ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಭಾರತಿಯ ರೆಡಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಬೆಳಗಾವಿ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು, ಪದವಿ ಮಹವಿದ್ಯಾಲಯ ಉಪನ್ಯಾಸಕರುಗಳಿಗೆ ಹಾಗೂ ಕಿರಿಯ ರೆಡ್‌ ಕ್ರಾಸ್ ಆಪ್ತ ಸಮಾಲೋಚಕರುಗಳಿಗಾಗಿ ಜನೇವರಿ ಹಾಗೂ ಫೆಬ್ರುವರಿ ಮಾಹೆಗಳಲ್ಲಿ ವಿವಿಧ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ.

ಆಸಕ್ತ ಶಿಕ್ಷಕರು, ಉಪನ್ಯಾಸಕರುಗಳು ಹಾಗೂ ಸ್ವಯಂ ಸೇವಕರುಗಳು ತಮ್ಮ ವಿದ್ಯಾಲಯಗಳ ಪ್ರಾಂಶುಪಾಲರುಗಳಿಂದ ಅನುಮತಿ ಪತ್ರಗಳೊಂದಿಗೆ ಭಾರತೀಯ ರೆಡ್ ಕ್ರಾಸ ಸಂಸ್ಥೆ, ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಆವರಣ, ಬೆಳಗಾವಿ ಇಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್.ಎನ್.ಮೂಲಿಮನಿ ಮೊ.9448907581 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Home add -Advt

Related Articles

Back to top button