Belagavi NewsBelgaum NewsKannada NewsKarnataka NewsPolitics
*ಮಾತುಕತೆಗೆ ಕರೆದು ಹಲ್ಲೆ ಮಾಡಿದ್ರು: ಲಕ್ಷ್ಮಣ ಸವದಿ ಕುಟುಂಬದ ವಿರುದ್ಧ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷ್ಯ ನಿಂಗಪ್ಪ ಕರೆಣ್ಣವರ ಗಂಭೀರ ಆರೋಪ ಮಾಡಿದ್ದಾರೆ.
ಮಾತುಕತೆ ಮಾಡಲು ಮನೆಗೆ ಕರೆದಿದ್ದು ನನ್ನ ತಲೆ ಒಡೆಯುವಂತೆ ಹೊಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡ ನಿಂಗಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಲಕ್ಷ್ಮಣ ಸವದಿ ಮನೆ ಹತ್ತಿರದಿಂದಲೇ ಗಂಭೀರವಾಗಿ ಗಾಯಗೊಂಡ ನಿಂಗಪ್ಪ ಕರೆಣ್ಣವರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದೆ.




