CrimeKannada NewsKarnataka NewsLatest

*ಶಬರಿಮಲೆಯಿಂದ ಬಂದ ದಿನವೇ ಪತ್ನಿಯನ್ನೇ ಕೊಲೆಗೈದು ನದಿಗೆ ಬಿಸಾಕಿದ ಪತಿ*

ಪ್ರಗತಿವಾಹಿನಿ ಸುದ್ದಿ: ಪತಿಯ ಹುಚ್ಚಾಟಗಳನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿ ಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದು ಶವವನ್ನು ನದಿಗೆ ಬಿಸಾಕಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ಯಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು ಕೊಲೆಗೈದ ಪತಿ, ಶವವನ್ನು ಯಗಚಿ ನದಿಗೆ ಬಿಸಾಕಿ ಬಂದಿದ್ದಾನೆ. ಸದ್ಯ ಪೊಲೀಸರು ಕುಮಾರ್ ನನ್ನು ಬಂಧಿಸಿದ್ದಾರೆ.

ಕುಮಾರ್ ಹಾಗೂ ರಾಧಾ ಹಲವು ವರ್ಷಗಳ ಹಿಂದೆಯೇ ವಿವಾಹವಾಗಿದ್ದರು. ದಂಪತಿಗೆ 22 ವರ್ಷದ ಮಗನಿದ್ದಾನೆ. ಬರಬರುತ್ತಾ ಪತಿ ಕುಮಾರ್ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುವುದು, ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ಮಾಡುತ್ತಲೇ ಇದ್ದ. ಕಳೆದ ನಾಲ್ಕು ವರ್ಷಗಳಿಂದ ಪತಿಯ ವರ್ತನೆ ಮಿತಿ ಮೀರಿತ್ತು. ಈಗ ಇದ್ದಕ್ಕಿದ್ದಂತೆ ಎರಡನೇ ಮದುಯಾಗಿರುವ ವಿಷಯ ಪತ್ನಿಗೆ ತಡವಾಗಿ ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪತ್ನಿ ರಾಧಾ ಪತಿಯನ್ನು ಪ್ರಶ್ನಿಸಿದ್ದಾಳೆ. ಇಬ್ಬರ ನಡುವೆ ಗಲಾಟೆಯಾಗಿದೆ.

ಇದಾದ ಬಳಿಕ ಕುಮಾರ್ ಶಬರಿಮಲೆಗೆ ಹೋಗಿಬಂದಿದ್ದಾನೆ. ಮನೆಗೆ ಬಂದವನೇ ಮೊದಲ ಪತ್ನಿ ರಾಧಾಳನ್ನು ಬರ್ಬರವಾಗಿ ಕೊಲೆ ಮಾಡಿ, ಬಳಿಕ ಶವವನ್ನು ಯಗಚಿ ನದಿಗೆ ಬಿಸಾಕಿದ್ದಾನೆ. ಪೊಲೀಸರ ವಿಚಾರಣೆ ವೇಳೆ ತಾನೇ ಪತ್ನಿಯನ್ನು ಕೊಂದು ನದಿಗೆ ಎಸೆದಿದ್ದಾಗಿ ಬಾಯ್ಬಿಟ್ಟಿದ್ದಾನೆ.

Home add -Advt


Related Articles

Back to top button