Belagavi NewsBelgaum NewsKarnataka NewsLatestPolitics

*ಪಾರಾಯಣ ಸೋಹಳಾದಲ್ಲಿ ಭಾಗವಹಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಎಳೆಬೈಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶ್ರೀ ಜಗದ್ಗುರು ತುಕಾರಾಂ ಗಾಥಾ ಪಾರಾಯಣ ಹಾಗೂ ಭವ್ಯ ರಿಂಗಣ ಸೋಹಳಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿದರು.

ವಾರಕರಿ ಸಂಪ್ರದಾಯದ ಈ ಅದ್ಭುತ ಆಚರಣೆಯನ್ನು ಕಣ್ತುಂಬಿಕೊಂಡು, ಭಜನೆ-ಪಾರಾಯಣದಲ್ಲಿ ಭಾಗವಹಿಸಿದ ಸಚಿವರು, ಶ್ರೀ ವಿಠ್ಠಲ-ರುಕ್ಮಾಯಿಯ ಆಶೀರ್ವಾದ ಪಡೆದು, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.

ಸಂಕ್ರಾಂತಿ ಶುಭಾಶಯ

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹುಕ್ಕೇರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಬೆಳಗಾವಿಯ ಗೃಹ ಕಚೇರಿಗೆ ಆಗಮಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಚೇತನ್‌ಕುಮಾರ್, ಬೆಳಗಾವಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಖಾನಾಪುರ ತಾಲೂಕಿನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಕ್ರಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button