Kannada NewsKarnataka NewsLatest
*ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ದುರಂತ: ಒಂದೇ ಕುಟುಂಬದ ನಾಲ್ವರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಬಟ್ಟೆ ತೊಳೆಯಲು ಭದ್ರಾ ನಾಲೆಗೆ ಹೋಗಿದ್ದ ಕುಟುಂಬದವರು, ಕಾಲು ಜಾರಿ ಬಿದ್ದು ನಾಲ್ವರು ನೀರುಪಾಲಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಅರಬಿಳಚಿ ಕ್ಯಾಂಪ್ ಬಳಿ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಬಟ್ಟೆ ತೊಳೆಯಲೆಂದು ಭದ್ರಾ ನಾಲೆಗೆ ಇಳಿದಿದ್ದ ವೇಳೆ ನಾಲ್ವರಲ್ಲಿ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಇನ್ನೊಬ್ಬರು ನೀರಿಗೆ ಹಾರಿದ್ದು, ಹೀಗೆ ಒಬ್ಬರನ್ನು ರಕ್ಷಿಸಲೆಂದು ಮತ್ತೊಬ್ಬರು ಹೋಗಿ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನೀಲಾಬಾಯಿ (55), ಮಗ ರವಿ ಕುಮಾರ್, ಮಗಳು ಶ್ವೇತಾ ಹಾಗೂ ಅಳಿಯ ಪರಶುರಾಮ ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


