Kannada NewsKarnataka NewsNationalPolitics
*ಬೆಳೆ ವಿಮೆ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಕೃಷಿ ಇಲಾಖೆಗೆ ದ್ವಿತೀಯ ಸ್ಥಾನ*

ಪ್ರಗತಿವಾಹಿನಿ ಸುದ್ದಿ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ದೊರೆತಿದೆ. ದೊಡ್ಡ ರಾಜ್ಯಗಳ ಪೈಕಿ ಯೋಜನೆ ಅನುಷ್ಠಾನದಲ್ಲಿ ಒಟ್ಟಾರೆ ಪ್ರಗತಿಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕೃಷಿ ಇಲಾಖೆಗೆ ಪ್ರಶಸ್ತಿ ಸಂದಿದೆ.
27,04,166 ರೈತರು ನೋಂದಣೆ ಪೈಕಿ 11,85,642 ರೈತರು ರೂ 2094 ಕೋಟಿ ಕ್ಲೇಮ್ ಮಾಡಿದಾರೆ. 2024- 25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಶಂಸನ ಪತ್ರವನ್ನು ನೀಡಿದೆ.
ಕೃಷಿ ಇಲಾಖೆಯ ಆಯುಕ್ತರು ಹಾಗೂ ಕೃಷಿ ನಿರ್ದೇಶಕರಿಗೆ ಜ.18ರಂದು ಬೆಂಗಳೂರಿನಲ್ಲಿ ನಡೆದ 13ನೇಯ ರಾಷ್ಟ್ರೀಯ ಸಮ್ಮೇಳನದಂದು ಭಾರತ ಸರ್ಕಾರದ ಸಹಕಾರ ಸಚಿವಾಲಯ ಕಾರ್ಯದರ್ಶಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.




