ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ಈ ವರ್ಷದ ಮೊದಲ ಚಂದ್ರಗ್ರಹಣ. ಈ ವರ್ಷ ಸಂಭವಿಸುವ ನಾಲ್ಕು ಚಂದ್ರ ಗ್ರಹಣಗಳಲ್ಲಿ ಇದೇ ಮೊದಲನೆಯದು. ಪೆನ್ಯೂಂಬ್ರಲ್ ಲೂನಾರ್ ಎಕ್ಲಿಫ್ಸ್ ಅಥವಾ ವುಲ್ಫ್ ಲೂನಾರ್ ಎಕ್ಲಿಫ್ಸ್ ಅಥವಾ ತೋಳ ಚಂದ್ರಗಹಣ ಎಂದು ಈ ಚಂದ್ರಗ್ರಹಣವನ್ನು ಕಾರೆಯಲಾಗುತ್ತಿದೆ.
ಯೂರೋಪ್, ಆಫ್ರಿಕಾ, ಏಷಿಯಾ, ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಆಸ್ಪ್ರೇಲಿಯಾದಲ್ಲಿ ತೋಳ ಚಂದ್ರಗ್ರಹಣ ಗೋಚರಿಸಲಿದೆ. ಇಂದು ರಾತ್ರಿ 10.37ಕ್ಕೆ ಪ್ರಾರಂಭವಾಗುವ ಗ್ರಹಣ ಶನಿವಾರ ಬೆಳಗಿನ ಜಾವ 2.42ಕ್ಕೆ ಮುಕ್ತಾಯವಾಗುತ್ತದೆ. ನಮ್ಮ ರಾಜ್ಯದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಭಾರತದ ಕೆಲ ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ.
ಇನ್ನು ಪ್ರಾಚೀನ ಕಥೆಗಳ ಪ್ರಕಾರ ಹಾಗೂ ಪುರಾಣದ ಪ್ರಕಾರ ಜನವರಿ ತಿಂಗಳ ಹುಣ್ಣಿಮೆಯಂದು ತೋಳಗಳು ಹೆಚ್ಚಾಗಿ ಊಳಿಡುವುದರಿಂದ ಇದೇ ಹುಣ್ಣಿಯಂದು ಈ ಚಂದ್ರಗ್ರಹಣಾ ಸಂಭವಿಸುತ್ತಿರುವುದರಿಂದ ಇದನ್ನು ತೋಳ ಚಂದ್ರಗ್ರಹಣವೆಂದು ಕಾರೆಯಲಾಗುತ್ತಿದೆ.
ಜ್ಯೋತಿಷ್ಯದ ಪ್ರಕಾರ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಒಂದು ವಿದ್ಯಾಮಾನವಾಗಿದ್ದು ಸೂರ್ಯನಿಂದ ಬರುವ ಬೆಳಕನ್ನು ಭೂಮಿ ನಿರ್ಬಂಧಿಸಿದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಗ್ರಹಣ ಸಂಭವಿಸುತ್ತದೆ. ಈ ಅರೆನೆರಳಿನ ಚಂದ್ರಗ್ರಹಣವನ್ನು ಕತ್ತಲಿನಲ್ಲಿ ಸ್ವಲ್ಪ ನೋಡುವುದು ಕಷ್ಟ. ಭೂಮಿಯು ಸಂಪೂರ್ಣವಾಗಿ ಸೂರ್ಯನ ಬೆಳಕನ್ನು ನಿರ್ಬಂಬಧಿಸುವುದಿಲ್ಲ. ಯಾಕೆಂದರೆ ಸೂರ್ಯ, ಭೂಮಿ, ಚಂದ್ರ ಒಂದೇ ರೇಖೆಯಲ್ಲಿ ಇರುವುದಿಲ್ಲ. ಹಾಗಾಗಿ ಚಂದ್ರನ ಎಲ್ಲಾ ಭಾಗ ಅಥವಾ ಒಂದು ಭಾಗವನ್ನು ಮಾತ್ರ ಭೂಮಿಯು ನೆರಳಿನ ಹೊರಭಾಗದಿಂದ ಆವರಿಸುತ್ತದೆ. ಶೇ.90ರಷ್ಟು ಗ್ರಹಣ ಸಂಭವಿಸಿದ ಸಮಯದಲ್ಲಿ ಅಂದರೆ, ರಾತ್ರಿ 12.41ರ ಹೊತ್ತಿಗೆ ಚಂದ್ರನ ಮೇಲೆ ಬಿದ್ದಿರುವ ಭೂಮಿಯ ನೆರಳನ್ನು ಬರಿಗಣ್ಣಿನಿಂದ ನೋಡಿದರೂ ಸ್ಪಷ್ಟವಾಗಿ ಗುರುತಿಸಬಹುದು ಎಂಬುದು ಹಲಾವರ ಅಭಿಪ್ರಾಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ