Belagavi NewsBelgaum NewsKannada NewsKarnataka NewsLatestPolitics

*ಉಚಗಾಂವ ಗ್ರಾಮದಲ್ಲಿ ಅರಿಶಿನ -ಕುಂಕುಮ ಸಂಭ್ರಮ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಅರಿಸಿನ- ಕುಂಕುಮ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮದ ಮಹಿಳೆಯರ ಜೊತೆ ಸಂಭ್ರಮಿಸಿದರು.


ಅರಿಸಿನ – ಕುಂಕುಮ ಕಾರ್ಯಕ್ರಮ ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಸಂಪ್ರದಾಯಗಳನ್ನು ಉಳಿಸಿ, ಬೆಳೆಸುವ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಪ್ರತಿ ಊರಲ್ಲಿ 2-3 ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ಜಾತಿ, ಜನಾಂಗದ ಜನರು ಒಟ್ಟಾಗಿರಬೇಕೆನ್ನುವುದೇ ನನ್ನ ಧ್ಯೇಯ. ನಾವೆಲ್ಲ ಒಂದು ಕುಟುಂಬದ ರೀತಿಯಲ್ಲಿ ಮುನ್ನಡೆಯೋಣ ಎಂದು ಸಚಿವರು ಹೇಳಿದರು.


ಗ್ರಾಮದ ಅಭಿವೃದ್ಧಿಗೆ ನಿರಂತರ ಅನುದಾನ ಒದಗಿಸುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.

Home add -Advt

Related Articles

Back to top button