ಶ್ರೀರಾಮುಲು ಪಿಎಗಳನ್ನು ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ: ತಿಪ್ಪೇಸ್ವಾಮಿ ಆರೋಪ

ಚಿತ್ರದುರ್ಗ: ಸಚಿವ ಬಿ. ಶ್ರೀರಾಮುಲು ಅವರಿಗೆ ಗೆ ಸಚಿವ ಸ್ಥಾನ ನಿಭಾಯಸು ಬರುತ್ತಿಲ್ಲ. ಕೇವಲ ಬಿಲ್ಡಪ್ ಕೊಟ್ಟುಕೊಂಡು ಓಡಾಡುತ್ತಿದ್ದಾರೆ. ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದು ಜನರ ಕಷ್ಟಗಳನ್ನು ಆಲಿಸುವುದನ್ನು ಬಿಟ್ಟು, ಪಿಎಗಳ ಮುಲಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಮಾತನಾಡಿದ ತಿಪ್ಪೇಸ್ವಾಮಿ, ಸಚಿವ ಶ್ರೀರಾಮುಲು ಕ್ಷೇತ್ರಕ್ಕೆ ಬಂದು ಜನರ ಕುಂದು ಕೊರತೆ ವಿಚಾರಿಸುತ್ತಿಲ್ಲ. ಹಣ ವಸೂಲಿಗೆಂದೇ ಎಲ್ಲ ಡಿಪಾರ್ಟ್​ಮೆಂಟ್​ಗೂ ಒಬ್ಬೊಬ್ಬ ಪಿಎಗಳನ್ನು ಇಟ್ಟಿದ್ದಾರೆ. ತಾವು ಯಾವ ಹಳ್ಳಿಗೂ ಹೋಗದೆ ಎಲ್ಲ ಕಡೆಯೂ ಪಿಎಗಳನ್ನು ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಅದಕ್ಕಾಗಿಯೇ 20 ಪಿಎ ಗಳನ್ನು ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.

ಕೇವಲ ಬಿಲ್ಡಪ್ ಕೊಟ್ಟುಕೊಂಡು ಓಡಾಡುವ ಶ್ರೀರಾಮುಲು ನಾನು ಮಾಡಿದ ಯೋಜನೆಗಳನ್ನು ತನ್ನದು ಎಂದು ಹೇಳಿಕೊಂಡು ವೇದಿಕೆಯೇರಿ ಕೂರುತ್ತಿದ್ದಾರೆ. ಆತ ಎಂತಹ ಬುಡಬುಡಿಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಳ್ಳು ಆಶ್ವಾಸನೆ ನೀಡುವುದರಲ್ಲಿ ಶ್ರೀರಾಮುಲು ನಂಬರ್ ಒನ್. ನಿನ್ನ ಬುಡಬುಡಿಕೆ ಮಾಅತುಗಳಿಗೆ ಇಲ್ಲಿನ ಜಾನ ಬೆಲೆಕೊಡಲ್ಲಾ, ಅದೇನಿದ್ದರೂ ಬಳ್ಳಾರಿಯಲ್ಲಿ ಇಟ್ಟುಕೋ. ಬಳ್ಳಾರಿಯಲ್ಲಿಯೇ ಈಗ ನಿನ್ನ ವರ್ಚಸ್ಸು ಕಡಿಮೆಯಾಗಿದೆ ಅಲ್ಲಿ ಕೂಡ ನಿನ್ನ ಆಟ ನಡೆಯಲಿಲ್ಲ ಎಂದು ತಿಪ್ಪೇಸ್ವಾಮಿ ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button