*ಚೇತನ ಸಿಂಗ್ ರಾಥೋರ್, ಸೀಮಾ ಲಾಟ್ಕರ್ ಸೇರಿದಂತೆ ಹಲವರಿಗೆ ಗಣರಾಜ್ಯೋತ್ಸವ ಪದಕ*

ಪ್ರಗತಿವಾಹಿನಿ ಸುದ್ದಿ: ಗಣರಾಜ್ಯೋತ್ಸವ ಅಂಗವಾಗಿ ದೇಶ ಹಾಗೂ ರಾಜ್ಯದ ಭದ್ರತಾ ಅಧಿಕಾರಿಗಳಿಗೆ ಪದಕ ಪ್ರದಾನ ನಡೆಯಲಿದ್ದು, ರಾಜ್ಯದ ಅಧಿಕಾರಿಗಳಾದ ಬೆಳಗಾವಿ ವಿಭಾಗದ ಐಜಿಪಿ ಚೇತನ ಸಿಂಗ್ ರಾಥೋರ್, ಡಿಐಜಿ ಸೀಮಾ ಲಾಟ್ಕರ್ ಸೇರಿದಂತೆ 22 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗಣರಾಜ್ಯೋತ್ಸವ ಪದಕ ದೊರೆತಿದೆ.
ದೇವಜ್ಯೋತಿ ರೈ (IPS,ಎಡಿಜಿಪಿ ಹ್ಯುಮನ್ ರೈಟ್ಸ್), ರಂಗಪ್ಪ ಟಿ (ACP,ಹಲಸೂರು ಉಪವಿಭಾಗ) ಈ ಇಬ್ಬರು ಅಧಿಕಾರಿಗಳಿಗೆ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ ದೊರೆತಿದೆ.
ಪೊಲೀಸ್ ಅಧಿಕಾರಿಗಳಾದ ಅಮಿತ್ ಸಿಂಗ್ (IGP), ಚೇತನ್ ಸಿಂಗ್ ರಾಥೋರ್ (IGP), ಸೀಮಾಲಾಟ್ಕರ್ (DIG), ಸವಿತಾ ಶ್ರೀನಿವಾಸ್ (SP), ರಾಜಿಮಾಮ್ ಖಾಸಿಮ್ (DCP) ಪುಟ್ಟಮಾದಯ್ಯ (ASP), ನಾಗಪ್ಪ ನವೀನ್ ಕುಮಾರ್ (ASP), ಹನುಮಂತರಾಯ (DSP),ಸಿ ಎ ಸೈಮನ್ (SP), ಮೊಹಮ್ಮದ್ ಎಂ.ಎ (ಇನ್ಸ್ಪೆಕ್ಟರ್), ಶಿವಸ್ವಾಮಿ ಸಿ ಬಿ (ಇನ್ಸೆಕ್ಟರ್), ಎಂಎಂ ತಹಶೀಲ್ದಾರ್ (ಇನ್ಸೆಕ್ಟರ್), ಎಸ್.ಕೆ ಬ್ಯಾಕೋಡ್ (ಇನ್ಸೆಕ್ಟರ್), ಕಾಶಿನಾಥ್ ಬಿ(PSI), ವಿ ಫೆಮಿನಾ (PSI), ಶಕುಂತಲಾ ಹೆಚ್ ಕೆ (PSI), ಹೆಚ್.ಡಿ ಈರಪ್ಪ (HC), ಹರ್ಷ ನಾಗರಾಜ್(ASI), ಬಸವರಾಜ್ ಎಂ(HC), ಸಿದ್ಧರಾಜು ಜಿ(ASI) ಜೊತೆಗೆ ಅಗ್ನಿಶಾಮಕ ಇಲಾಖೆಯ 5 ಜನರಿಗೆ, ಹೋಂ ಗಾರ್ಡನ್ 5 ಜನರಿಗೆ ಪದಕ ದೊರೆತಿದೆ.



