Belagavi NewsBelgaum NewsFilm & EntertainmentKannada NewsLatest

*ಮಂತ್ರಮುಗ್ಧರನ್ನಾಗಿಸಿದ ಮೂರು ಗಂಟೆಗಳ ನಾಟಕ ‘ಕಂದಗಲ್ಲ ಭಾರತ’*

ಪ್ರಗತಿವಾಹಿನಿ ಸುದ್ದಿ: ನಗರದ ರಂಗಸಂಪದದವರು ದಿ. 24 ರಂದು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಧಾರವಾಡದ ರಂಗಾಯಣ ತಂಡದವರಿಂದ ‘ಕಂದಗಲ್ಲರಿಗೆ ನಮಸ್ಕಾರ’ (ಕಂದಗಲ್ಲ ಭಾರತ) ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಮೂರು ಗಂಟೆ ಮುವತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಈ ನಾಟಕ ಯಶಸ್ವಿಯಾಯಿತು.

ಮಹಾಭಾರತವನ್ನು ಆಧರಿಸಿ ರಚಿಸಿದ ಕಂದಗಲ್ಲ ಹನುಮಂತರಾಯರ ಏಳು ನಾಟಕಗಳನ್ನು ಆಕರವಾಗಿ ಬಳಿಸಿಕೊಳ್ಳಲಾಗಿತ್ತು. ಅತ್ಯಂತ ದೀರ್ಘ ಕಾಲದ (ಮೂರು ಗಂಟೆ ಮುವತ್ತು ನಿಮಿಷ) ಈ ನಾಟಕ ಬೇಸರ ತರಿಸುತ್ತದೆ, ಈ ನಾಟಕವನ್ನು ನೋಡುವರಾರು ಎಂಬ ಮಾತುಗಳು ಕೇಳಿಬರುತ್ತಿದ್ದವು. ಕೊನೆವರೆಗೂ ಪ್ರೇಕ್ಷಕರನ್ನು ತಡೆಹಿಡಿಯುವಲ್ಲಿ ಈ ನಾಟಕ ಯಶಸ್ವಿಯಾಯಿತು. ಮೂರು ಗಂಟೆಗಳು ಕಳೆದುದೇ ಪ್ರೇಕ್ಷಕರಿಗೆ ಗೊತ್ತಾಗಲಿಲ್ಲ.

ನಾಟಕದಲ್ಲಿ ಕೆಲ ಸನ್ನಿವೇಶಗಳು ಅನವಶ್ಯಕ, ಸಂಬಂಧವಿಲ್ಲದಂತೆ ಅನ್ನಿಸಿದವು. ಅದರಲ್ಲಿಯೂ ವಿಶೇಷವಾಗಿ ಕಲಿಯುಗ ಕುರಿತಂತೆ ಕೃಷ್ಣನಿಂದ ಹೇಳಿಸಿರುವುದು. ಆ ಸಂದರ್ಭದಲ್ಲಿ ಮಾಡರ್ನ ನೃತ್ಯವನ್ನು ನಾಟಕದಲ್ಲಿ ಸೇರಿಸಿರುವುದು. ಏಕೋ ಅಷ್ಟೊಂದು ಸರಿಯನ್ನಿಸಲಿಲ್ಲ ಪೌರಾಣಿಕ ನಾಟಕ ನೋಡುವುದರಲ್ಲಿ ತಲ್ಲೀನರಾಗಿದ್ದ ಪ್ರೇಕ್ಷಕರಿಗೆ ಇದು ಕಿರಿಕಿರಿಯನ್ನುಂಟು ಮಾಡಿತು.

Home add -Advt

ಕೊನೆಯಲ್ಲಿ ಮಾತನಾಡಿದ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ, ನವರಸಗಳಿಂದ ಕೂಡಿದ ಕಂದಗಲ್ಲ ಭಾರತ ನಾಟಕ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿ ಎಲ್ಲ ಕಲಾವಿದರನ್ನು ಅಭಿನಂದಿಸಿದರು.

ಕಲಾವಿದರಾದ ದುಂಡೇಶ ಹಿರೇಮಠ, ಸುನೀಲ ಲಗಳಿ, ಗೋಪಾಲ ಉಣಕಲ್ಲ, ಯೋಗೇಶ, ರೇಖಾ ಹೊಂಗಲ, ನೀತು, ಅಕ್ಕಮ್ಮ ದೇವರಮನಿ, ಕೀರ್ತಿ, ವೀರಣ್ಣ ಹೋಸಮನಿ, ಸಂತೋಷ, ವಿನೋದ ದಂಡಿನ, ಪವನ ದೇಶಪಾಂಡೆ, ಪವನ ದೇಸಾಯಿ, ಗಿರೀಶ ದೊಡಮನಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡರು. ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದರು. ವಿಶೇಷವಾಗಿ ದ್ರೌಪದಿ, ಕೃಷ್ಣ, ದುರ್ಯೋಧನ ಪಾತ್ರಧಾರಿಗಳ ಅಭಿನಯ ತುಂಬ ನೈಜವಾಗಿದ್ದು ಎಲ್ಲರ ಗಮನ ಸೆಳೆದವು.

ಪ್ರಕಾಶ ಗರುಡ ಅವರ ನೀರ್ದೇಶನದಲ್ಲಿ ಮೂಡಿ ಬಂದ ನಾಟಕದ ವೇಷಭೂಷಣ ರಜನಿ ಗರುಡ, ರಂಗಸಜ್ಜಿಕೆ ಶ್ವೇತಾರಾಣಿ ಎಚ್.ಕೆ, ನೆಳಲು ಬೆಳಕು ಮಧು , ಹಿನ್ನೆಲೆ ಸಂಗೀತ ರಾಘವ ಕಮ್ಮಾರ, ಪರಿಕರಗಳು ಶಿವಕುಮಾರ ಗದಗ ಮತ್ತು ವೆಂಕಟೇಶ, ಸಹನಿರ್ದೇಶನ ಪವನ .

Related Articles

Back to top button