Kannada NewsKarnataka NewsLatest

*BREAKING: ಹಾಡಹಗಲೇ ಪಿಸ್ತೂಲ್ ತೋರಿಸಿ ಮತ್ತೊಂದು ಚಿನ್ನದಂಗಡಿ ದರೋಡೆ*

ಪ್ರಗತಿವಾಹಿನಿ ಸುದ್ದಿ: ಹಾಡಹಗಲೇ ರಾಜ್ಯದಲ್ಲಿ ಮತ್ತೊಂದು ಚಿನ್ನದಂಗಡಿ ದರೋಡೆಯಾಗಿದೆ. ಚಿನ್ನದಂಗಡಿಗೆ ನುಗ್ಗಿದ ಇಬ್ಬರು ದರೋಡೆಕೋರರು ಪಿಸ್ತೂಲ್ ಹಿಡಿದು ಅಲ್ಲಿದ್ದವರನ್ನು ಹೆದರಿಸಿ ಚಿನ್ನದಂಗಡಿ ದೋಚಿ ಪರಾರಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣದ ಹಲಸಂಗಿಯಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದರೋಡೆಕೋರರು ಚಿನ್ನದಂಗಡಿಗೆ ನುಗ್ಗಿ, ವೃದ್ಧೆಯೊಬ್ಬರನ್ನು ಹೆದರಿಸಿದ್ದಾರೆ. ಅಲ್ಲದೇ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಚಿನ್ನದಂಗಡಿಗೆ ಬಂದಿದ್ದ ಓರ್ವ ಯುವಕನ ಕಾಲಿಗೆ ಗುಂಡೇಟು ತಗುಲಿದೆ.

ಮಹಾರುದ್ರ ಕಂಚಗಾರ ಎಂಬುವವರಿಗೆ ಸೇರಿದ ಚಿನ್ನದಂಗಡಿಯಲ್ಲಿ ದರೋಡೆ ನಡೆದಿದೆ. ಚಿನ್ನಾಭರಣಗಳನ್ನು ದೋಚಿ ಕಳ್ಳರ ಗ್ಯಾಂಗ್ ಸ್ಥಳದಿಂದ ಎಸ್ಕೇಪ್ ಆಗಿದೆ.

Home add -Advt

Related Articles

Back to top button