Belagavi NewsBelgaum NewsKannada NewsKarnataka NewsPolitics

*ಸವದತ್ತಿಯಲ್ಲಿ ಪೊಲೀಸರಿಂದ ಕಾರ್ ಚಾಲಕನ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿಯ  ಜೋಗುಳ ಬಾವಿ ದೇವಸ್ಥಾನದ ಬಳಿ ಕಾರ್ ಚಾಲಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯನ್ನು ಖಂಡಿಸಿ  ಪ್ರತಿಭಟನೆ ನಡೆಸಲಾಯಿತು.‌

ಮಂಗಳವಾರ ಕರ್ನಾಟಕ ಚಾಲಕರ ಒಕ್ಕೂಟದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.‌

ಸವದತ್ತಿಯ ಜೋಗುಳ ಬಾವಿ ದೇವಸ್ಥಾನದ ಬಳಿ, ಶಿವಾನಂದ ಅರ್ಜುನ ಕಾಂಬಳೆ ಎಂಬ ಕಾರ್ ಚಾಲಕನ ಮೇಲೆ ಸವದತ್ತಿ ತಾಲೂಕಿನ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸೇರಿ ಹಲ್ಲೆ ಮಾಡಿದ್ದಾರೆ.‌

ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ ಮಾಡಿದ್ದಾನೆ ಎಂದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಅಲ್ಲಿ ಯಾವ ನೋ ಪಾರ್ಕಿಂಗ್ ಫಲಕ ಇರಲಿಲ್ಲ ಇದನ್ನು ಕೇಳಿದ ಚಾಲಕನ ಬಟ್ಟೆ ಹಿಡಿದು ಎಳೆದಾಡಿ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಆಕ್ರೋಶ ಹೊಹಾಕಿದರು.‌

Home add -Advt

ಈ ಕೂಡಲೇ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಚಾಲಕನಿಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.‌

Related Articles

Back to top button