Kannada NewsKarnataka NewsPolitics

*ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ*

ಪ್ರಗತಿವಾಹಿನಿ ಸುದ್ದಿ: ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾಡಿದ್ದ ಎರಡು ಸಾಲುಗಳ ಭಾಷಣದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರದ ಹೈಲೈಟ್ಸ್ ಇಲ್ಲಿದೆ.

*ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ “ಜೈ ಸಂವಿಧಾನ” ಎನ್ನುವುದನ್ನೂ ಉಲ್ಲೇಖಿಸದೆ, ಓದದೆ ಹೋದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ.

Home add -Advt

ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಮಾತಾಡುವಾಗ ನನ್ನನ್ನು “ಅಸಹಾಯಕ ಮುಖ್ಯಮಂತ್ರಿ” ಎಂದು ಕರೆದಿದ್ದಾರೆ. ಕೆಲವು ಬಾರಿ, “ಅಸತ್ಯದ ಎದುರು ಸತ್ಯ ಅಸಹಾಯಕವಾಗಿಬಿಡುತ್ತದೆ

*ನಾವು ರಾಜ್ಯಪಾಲರ ವಿರುದ್ಧ ಇಲ್ಲ. ಕೇಂದ್ರ ಸರ್ಕಾರದ ವಿರುದ್ಧ ಇದ್ದೇವೆ. ಮನರೇಗಾ ಬದಲಾಯಿಸಿ “ವಿಬಿ ಜಿ ರಾಮ್ ಜಿ” ಎಂದು ಮಾಡಿದ್ದಾರೆ. ಇದರಲ್ಲಿರುವ ರಾಮ, ಧಶರಥ ರಾಮನೂ ಅಲ್ಲ. ಅಯೋಧ್ಯೆ ರಾಮನೂ ಅಲ್ಲ. ಹೆಸರು ಬದಲಾಯಿಸುವುದಕ್ಕೇ ಕೆಲವರನ್ನು ಅವರು ಇಟ್ಟುಕೊಂಡಿದ್ದಾರೆ ಅನ್ನಿಸತ್ತೆ.

*ಸಂವಿಧಾನದ ಆರ್ಟಿಕಲ್ 176 ಓದಿದ್ದರೆ ಚನ್ನಾಗಿರುತ್ತಿತ್ತು. ಸಂವಿಧಾನ ಜಾರಿಯಾದ ದಿನದಿಂದ ಇವತ್ತಿವರೆಗೆ ಜಂಟಿ ಅಧಿವೇಶನಗಳು ನಡೆದುಕೊಂಡು ಬಂದಿವೆ. ಇದು ಸಂವಿಧಾನದ ಪ್ರಕಾರ ನಡೆದುಕೊಂಡು ಬರುತ್ತಿರುವ ಪದ್ಧತಿ.

*ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಜ್ ಅವರ ಬಾಯಲ್ಲೂ ಹೇಳಿಸಿದ್ದೀರಿ.

*H.D.ಕುಮಾರಸ್ವಾಮಿ ಅವರು CM ಆಗಿದ್ದಾಗ “ನರೇಗ ಉದ್ಯೋಗ ಸಂಜೀವಿನಿ” ಎಂದು ಕರೆದಿದ್ದರು. ಈಗ ಬಿಜೆಪಿ ಜೊತೆ ಸೇರಿ ನರೇಗಾ ವಿರೋಧಿಸುತ್ತಿದ್ದಾರೆ.

•ರಾಜ್ಯಪಾಲರ ಭಾಷಣದ ಮೇಲೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ 15 ಜನ ಸದಸ್ಯರು ಮಾತನಾಡಿದ್ದಾರೆ. ಕಾಂಗ್ರೆಸ್ ನ ವಂದನಾ ನಿರ್ಣಯ ಮಂಡಿಸಿದ ಪೊನ್ನಣ್ಣ, ಮತ್ತು ಪ್ರದೀಪ್ ಈಶ್ವರ್ ರವರು ಅನುಮೋದನೆ ಮಾಡಿದ್ದಾರೆ. ಸುಮಾರು 9 ಜನ ಮಾತನಾಡಿದ್ದು, ಜೆಡಿಎಸ್ ನಿಂದ ಸುರೇಶ್ ಬಾಬುರವರು ಮತ್ತು ಪಕ್ಷೇತರರಲ್ಲಿ ಇಬ್ಬರು ಸೇರಿದಂತೆ ಒಟ್ಟು 27 ಜನ ಮಾತನಾಡಿದ್ದಾರೆ. ಕಾಂಗ್ರೆಸ್ 5 ಗಂಟೆ 18 , ಬಿಜೆಪಿಯವರು 8 ಗಂಟೆ 53 ನಿ , ಜೆಡಿಎಸ್ ನವರು 12 ನಿಮಿಷ ಮತ್ತು ಪಕ್ಷೇತರರು 54 ನಿಮಷ ಮಾತನಾಡಿದ್ದು, ಹೀಗೆ ಒಟ್ಟು 15 ಗಂಟೆ 17 ನಿಮಿಷ ಚರ್ಚೆ ನಡೆದಿದೆ.

• ಮಾನ್ಯ ರಾಜ್ಯಪಾಲರು ಅವರು ಪೂರ್ಣ ಭಾಷಣವನ್ನು ಓದದೇ, ಮೊದಲನೇ ಹಾಗೂ ಕಡೆಯ ಜೈಹಿಂದ್ ಜೈಕರ್ನಾಟಕ ಎಂದು ಓದಿದರು, ಭಾಷಣದಲ್ಲಿ ಬರೆದುಕೊಡಲಾಗಿದ್ದ ‘ಜೈಸಂವಿಧಾನ’ವನ್ನು ಹೇಳಲಿಲ್ಲ. ರಾಷ್ಟ್ರಗೀತೆ ಮುಗಿಯುವವರೆಗೂ ರಾಜ್ಯಪಾಲರು ತೆರಳಬಹುದಿತ್ತು. ಈ ಬಗ್ಗೆ ಸಂವಿಧಾನದ ಕಲಂ 176 , 163 ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ.
• ಶಾಸಕ ಸುನಿಲ್ ಕುಮಾರ್ ಅವರು ‘ಸರ್ಕಾರ ಆಡಳಿತ ಹದಗೆಟ್ಟಿದೆ ಮತ್ತು ಸಂವಿಧಾನರಹಿತ ಸರ್ಕಾರ’ , ‘ಅಸಹಾಯಕ ಮುಖ್ಯಮಂತ್ರಿ’ ಎಂದಿದ್ದಾರೆ. ಕೆಲವೊಮ್ಮ ಅಸತ್ಯದ ಎದುರು ಸತ್ಯ ಅಸಹಾಯಕವಾಗುತ್ತದೆ.
• ಜನರು ನಮ್ಮನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ವಿರೋಧಪಕ್ಷದವರ ಮತ್ತು ಸರ್ಕಾರದವರ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ. ನಾವಿಬ್ಬರೂ ಪರಸ್ಪರ ಒಪ್ಪಲೇಬೇಕೆಂಬ ಷರತ್ತಿಲ್ಲ. ಆದರೆ ನಾವೆಲ್ಲರೂ ಸಂವಿಧಾನ ಒಪ್ಪಲೇಬೇಕು.
• ಸಂವಿಧಾನಬದ್ಧವಾಗಿ ಸರ್ಕಾರ, ಆಡಳಿತ ನಡೆಯಲೇಬೇಕು. ಸಂವಿಧಾನವನ್ನು ಯಾವುದೇ ಕಾರಣಕ್ಕೂ ವಿರೋಧಿಸಬಾರದು. ರಾಜ್ಯಪಾಲರು ಮೂಲತ: ಉತ್ತಮ ವ್ಯಕ್ತಿಯೇ. ನಾವು ರಾಜ್ಯಪಾಲರ ವಿರುದ್ಧವಿಲ್ಲ. ಆದರೆ ಕೇಂದ್ರ ಸರ್ಕಾರದ ನಮ್ಮ ವಿರೋಧವಿದೆ.
• ಭಾಷಣದಲ್ಲಿ ಮನರೇಗಾ ರದ್ದುಪಡಿಸಿ ವಿಬಿಜಿರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಜಿವಿಕ ಮಿಷನ್ ಗ್ರಾಮೀಣ)ವನ್ನು ಕೇಂದ್ರ ಜಾರಿಗೊಳಿಸಿದೆ. ಅದರಲ್ಲಿ ‘ಗ್ರಾಮ’ ಎನ್ನುವ ಪದವೂ ಇಲ್ಲ. ಈ ಕಾಯ್ದೆ ಜಾರಿಗೆ ಮುನ್ನ 176 ಕಲಂರನ್ನು ಕೇಂದ್ರ ವಿಶ್ಲೇಷಣೆ ಮಾಡಬೇಕಿತ್ತು.
• ಸಂವಿಧಾನ 1950ರಲ್ಲಿ ಜಾರಿಯಾಗಿ, ಇಂದಿನವರೆಗೂ ಹೊಸವರ್ಷದಲ್ಲಿ , ಹೊಸ ಸರ್ಕಾರ ಬಂದಾಗ, ಜಂಟಿ ಅಧಿವೇಶನ ನಡೆಯುತ್ತಲೇ ಬಂದಿದೆ.

ಇದರ ಜೊತೆಗೆ 2022 ರಿಂದ ಪ್ರತಿ ವರ್ಷ ರಾಜ್ಯಕ್ಕೆ 18 ರಿಂದ 20 ಸಾವಿರ ಕೋಟಿ ರೂಗಳಷ್ಟು ಜಿಎಸ್‌ ಟಿ ಪರಿಹಾರ ನಷ್ಟವಾಗಿದೆ. 4 ವರ್ಷಗಳಲ್ಲಿ 75 ರಿಂದ 80000 ಕೋಟಿ ಇದೊಂದೇ ಬಾಬತ್ತಿನಲ್ಲಿ ನಷ್ಟವಾಗಿದೆ. 2020 ರಿಂದ 2025 ರವರೆಗೆ 200000 ಕೋಟಿ ರೂಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ. ಜಿಎಸ್‌ ಟಿ ಪರಿಹಾರದ ಸೆಸ್ಸನ್ನು ಕೇಂದ್ರದವರು ಜನರಿಂದ ಸಂಗ್ರಹಿಸುವುದನ್ನು ನಿಲ್ಲಿಸಿದ್ದರೆ ಒಪ್ಪುತ್ತಿದ್ದೆ. ಬೆಲ್ಲದ್‌ ಅವರೆ 2025-26 ರಲ್ಲಿ 167000 ಕೋಟಿ ರೂಗಳಷ್ಟು ಸೆಸ್ಸನ್ನು ಸಂಗ್ರಹಿಸಿದ್ದಾರೆ [ ಈ ವರ್ಷ ಎಲ್ಲಾ ಸೆಸ್‌, ಸರ್‌ ಛಾರ್ಜ್‌ ಮುಂತಾದವು ಸೇರಿ 6 ಲಕ್ಷ ಕೋಟಿ ಸಂಗ್ರಹಿಸುತ್ತಿದ್ದಾರೆ].

*16 ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ ಆಯೋಗದ ಶಿಫಾರಸ್ಸುಗಳಿಂದಲೂ ನಮಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. 14 ನೇ ಹಣಕಾಸು ಆಯೋಗವು ನಮಗೆ ಶೇ.4.71 ರಷ್ಟು ತೆರಿಗೆ ಹಂಚಿಕೆ ಮಾಡಿತ್ತು. ಅದಕ್ಕಿಂತ ಹೆಚ್ಚಿನ ಅನುದಾನ ಸಿಕ್ಕರೆ ಮಾತ್ರ ನಮಗೆ ನ್ಯಾಯ ದೊರೆಯುತ್ತದೆಂದು ಹೇಳಿದ್ದೆವು. ಆದರೆ 16 ನೇ ಹಣಕಾಸು ಆಯೋಗವು ಶೇ.4.131 ರಷ್ಟನ್ನು ಮಾತ್ರ ಶಿಫಾರಸ್ಸು ಮಾಡಿದೆ. ತೆರಿಗೆ ಪಾಲನ್ನು ಶೇ. 50 ಕ್ಕೆ ಏರಿಸಿ ಎಂದು ಕೇಳಿದ್ದೆವು. ಆದರೆ ಶೇ. 41 ರಷ್ಟೆ ಕೊಟ್ಟಿದೆ. ಇದರಿಂದಲೂ ನಮಗೆ 14 ನೇ ಹಣಕಾಸು ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ ಶೇ.14.1 ರಷ್ಟು ಕಡಿಮೆಯಾಗುತ್ತದೆ. ಕರ್ನಾಟಕದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 5 ವರ್ಷಗಳಲ್ಲಿ 37,372 ಕೋಟಿ ರೂ ಸಿಕ್ಕರೆ ಉತ್ತರ ಪ್ರದೇಶಕ್ಕೆ 1.17 ಲಕ್ಷ ಕೋಟಿ, ಮಹಾರಾಷ್ಟ್ರಕ್ಕೆ 79.6 ಸಾವಿರ ಕೋಟಿ, ಮಧ್ಯಪ್ರದೇಶಕ್ಕೆ 48 ಸಾವಿರ ಕೋಟಿ ದೊರೆಯಲಿದೆ. ಹಾಗೆಯೇ ಪ್ರಕೃತಿ ವಿಕೋಪ ನಿಧಿಯಲ್ಲೂ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡಲಾಗಿದೆ. ನಮಗೆ 5135 ಕೋಟಿ ರೂ, ಮಹಾರಾಷ್ಟ್ರಕ್ಕೆ 31,597 ಕೋಟಿ, ಗುಜರಾತಿಗೆ 6766 ಕೋಟಿ ಸಿಗಲಿದೆ.

*ನಾವು ಬೆಂಗಳೂರಿನ ಅಭಿವೃದ್ಧಿಗೆ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು, ಅನುದಾನಗಳನ್ನು ಕೇಳಿದ್ದೆವು. ನಯಾಪೈಸೆ ಕೊಡಲಿಲ್ಲ.

*ಯತ್ನಾಳ್‌ ಮತ್ತು ಬಿಜೆಪಿ ಸದಸ್ಯರು ಮನಮೋಹನ್‌ ಸಿಂಗ್‌ ಅವರ ಅವಧಿ ಮತ್ತು ಮೋದಿಯವರ ಅವಧಿಯಲ್ಲಿ ಎಷ್ಟು ಅನುದಾನ ಬಂದವು ಎಂದು ಮಾತನಾಡಿದ್ದಾರೆ. ಕಳೆದ 3-4 ವರ್ಷಗಳಿಂದ ಈ ಮಾತನ್ನು ಹೇಳುತ್ತಲೇ ಇದ್ದಾರೆ.

• ಹಿಂದೆ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ‘ಗ್ರಾಮೀಣಾಭಿವೃದ್ಧಿಗೆ ಮನರೆಗಾ ಸಂಜೀವಿನಿ ’ ಎಂದಿದ್ದರು. ಆದರೆ ಅಂದು ಬೆಂಬಲಿಸಿದವರು ಇಂದು ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈಗ ವಿರೋಧಿಸುತ್ತಿದ್ದಾರೆ.
• ಜನವರಿ 22 ರಂದು ರಾಜ್ಯಪಾಲರ ಭಾಷಣ ಮಾಡಿದರು. ನಂತರ ಜನವರಿ 23 ರಂದು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ರಾಜ್ಯಪಾಲರ ಭಾಷಣದ ಓದದೇ ಇರಲು ಸಂವಿಧಾನದಲ್ಲಿ ಆಯ್ಕೆಯಿಲ್ಲ. ರಾಜ್ಯಪಾಲರ ನಡವಳಿಕೆ ಅವರ ಘನತೆಗೆ ತಕ್ಕುದಾದುದಲ್ಲ. ಅಧಿವೇಶನ ಐತಿಹಾಸಿಕ ಕಳಂಕಕ್ಕೆ ಸಾಕ್ಷಿಯಾಯಿತು, ರಾಜ್ಯಪಾಲರು ರಾಜಕೀಯ ಏಜೆಂಟ್ ರಂತೆ ವರ್ತಿಸುತ್ತಿರುವುದೇ ಇದಕ್ಕೆ ಕಾರಣ, ಎಂಬಿತ್ಯಾದಿ ಸಂಪಾದಕೀಯಗಳು ಪ್ರಕಟವಾಗಿದ್ದವು.
• ಕೇಂದ್ರ ವಿತ್ತ ಸಚಿವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವುದಾಗಿ ಘೋಷಿಸಿ , ನಂತರದ ರಾಜ್ಯ ಸರ್ಕಾರವೂ ಇದನ್ನು ರಾಷ್ಟ್ರೀಯ ಯೋಜನೆ ಘೋಷಿಸಲಾಗುವುದು ಎಂದೂ ತಿಳಿಸಿದ್ದರು. ಆದರೆ ಅನುದಾನವಾಗಲಿ, ರಾಷ್ಟ್ರೀಯ ಯೋಜನೆ ಎಂದಾಗಲಿ ಘೋಷಣೆಯಾಗಿಲ್ಲ. ಇದು ಸತ್ಯವಲ್ಲವೇ?
• 15 ನೇ ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿದ್ದ 11495 ಕೋಟಿ ರೂ.ಗಳು ರಾಜ್ಯಕ್ಕೆ ನೀಡಲಿಲ್ಲ. 14 ನೇ ಆಯೋಗದಲ್ಲಿ 4.71 % ರಾಜ್ಯಕ್ಕೆ ಕೊಡಲಾಗಿತ್ತು. 15 ನೇ ಆಯೋಗದಲ್ಲಿ 3.64% ಕ್ಕೆ ಇಳಿಸಿದರು. ಇದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ 1,25,000 ಕೋಟಿ ಕಡಿಮೆಯಾಯಿತು.
• ಈ ಅನುದಾನದ ಕಡಿತದ ಬಗ್ಗೆ ಪ್ರಶ್ನಿಸುವುದು ರಾಜ್ಯದ ಎಲ್ಲ ಜನಪ್ರತಿನಿಧಿಗಳ ಜವಾಬ್ದಾರಿ. ರಾಜ್ಯದಿಂದ 4.50 ಲಕ್ಷ ಕೋಟಿ ತೆರಿಗೆ ಕೊಟ್ಟರೆ, ನಮಗೆ ಕೇವಲ 55 ರಿಂದ 60 ಸಾವಿರ ಕೋಟಿ ರಾಜ್ಯಕ್ಕೆ ಬರುತ್ತದೆ.
• ಎಂಟು ವರ್ಷದಿಂದ ಹೆಚ್ಚು ಜಿಎಸ್ ಟಿ ತೆರಿಗೆ ಪಡೆದು, ಈಗ ಕೇಂದ್ರ ಸರ್ಕಾರ ಹಠಾತ್ತಾಗಿ ಜಿಎಸ್ ಟಿ ಯನ್ನು ಕಡಿತಗೊಳಿಸಿತು. ರಾಜ್ಯಕ್ಕೆ ಜಿಎಸ್ ಟಿ ಯಿಂದ 12-15 ಸಾವಿರ ಕೋಟಿ ನಷ್ಟವಾಗುತ್ತದೆ. ಇದು ಏಳು ಕೋಟಿ ಕನ್ನಡಿಗರಿಗೆ ಆದ ನಷ್ಟ.
• ಕೇಂದ್ರಸರ್ಕಾರ ಸೆಸ್ ಮತ್ತು ಸರ್ಜಾಜ್ ನ್ನು ಸುಮಾರು 6 ಲಕ್ಷ ಕೋಟಿ ವಸೂಲಿ ಯಾಗುತ್ತಿದ್ದು, ಇದರಲ್ಲಿ ರಾಜ್ಯಗಳಿಗೆ ಒಂದು ಪೈಸೆಯೂ ಬರುವುದಿಲ್ಲ. ಈ ಬಗ್ಗೆ ಧ್ವನಿಎತ್ತಿ ರಾಜ್ಯಗಳಿಗೂ ಪಾಲು ನೀಡಿ ಎಂದು ನಮ್ಮ ಸರ್ಕಾರ ಒತ್ತಾಯಿಸಿದ್ದರೂ, ಇದು ಜಾರಿಯಾಗಿಲ್ಲ. ಈ ಎಲ್ಲ ಅಂಶಗಳು ವಾಸ್ತವಾಂಶವಾಗಿದೆ.
• ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕಡಿತದ ಬಗ್ಗೆ ನಾನೆ ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ವಿತ್ತ ಸಚಿವರನ್ನು ಈ ಸಂಬಂಧ ಭೇಟಿ ಮಾಡಲಾಗಿದೆ. ಜಿಎಸ್ ಟಿ ಸಮಿತಿಸಭೆಯಲ್ಲಿ ರಾಜ್ಯಸರ್ಕಾರ ತನ್ನ ನಿಲುವನ್ನು ಮಂಡಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ.

ಶಾಸಕ ಸುನಿಲ್ ಕುಮಾರ್ ಮಾತಾಡುವಾಗ ನಾನು 2013-2018 ರ ವರೆಗೆ ಇದ್ದ ರೀತಿ ಇಲ್ಲ. ಅಸಹಾಯಕ ಮುಖ್ಯಮಂತ್ರಿ ಎಂದಿದ್ದಾರೆ.‌ ನಮ್ಮ ಸಂವೇದನೆಯನ್ನು, ಆಲಿಸುವ ಗುಣವನ್ನು ಪ್ರಶ್ನೆ ಮಾಡಿದ್ದಾರೆ. ಈ ಮಾಡುವ ಅರ್ಹತೆ ನಿಮಗೆ ಇದೆಯೇ? ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.

*2013-2018 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಆಗೇನು ನೀವು ವಿರೋಧ ಪಕ್ಷದವರು ನನ್ನನ್ನು ಹೊಗಳುತ್ತಿದ್ರಾ ? ಆಗಲೂ ಟೀಕಿಸುತ್ತಿದ್ರಿ. ನಾನು ಈಗಲೂ ಆಗಿನಂತೆಯೇ ಇದ್ದೇನೆ. ಮುಂದೆಯೂ ಇರ್ತೇನೆ.

*ನಾನು ಇದೇ ಸದನದಲ್ಲಿ ಕೋವಿಡ್‌ ಬಂದಾಗ ಜನರು ವಿಪರೀತ ಸಂಕಷ್ಟದಲ್ಲಿದ್ದಾರೆ. ಅವರ ದುಡಿಮೆಗಳೆಲ್ಲ ನಿಂತು ಹೋಗಿವೆ, ಕೊಂಡುಕೊಳ್ಳುವ ಶಕ್ತಿ ಹೊರಟು ಹೋಗಿದೆ. ಇದರಿಂದ ಆರ್ಥಿಕತೆ ಕೂಡ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಹಾಗಾಗಿ ಪ್ರತಿ ಕುಟುಂಬಕ್ಕೆ ಒಂದು ಸಾರಿ 10,000 ರೂ. ಕೊಡಿ ಅಂತ ಯಡಿಯೂರಪ್ಪನವರು ಮತ್ತು ಬೊಮ್ಮಾಯಿಯವರಿಗೆ ಹೇಳಿದ್ದೆ. ಸುನೀಲ್‌ ಕುಮಾರ್‌ ಕೂಡ ಮಂತ್ರಿಯಾಗಿದ್ದರು. ನೀವು ಒಂದು ರೂಪಾಯಿಯಾದ್ರೂ ಕೊಟ್ರಾ? ಜನ ಸಂಕಷ್ಟದ ಸುಳಿಯಲ್ಲಿದ್ದಾಗ ನಿಮ್ಮ ಸಂವೇದನೆ ಎಲ್ಲಿ ಹೋಗಿತ್ತು?

*ನಿಮಗೆ ಆಕ್ಸಿಜನ್‌ ಕೊಟ್ಟು ರೋಗಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ? ಆಕ್ಸಿಜನ್‌ ಇಲ್ಲದೆ ರೋಗಿಗಳು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಾಗ ನಿಮ್ಮ ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ರಾ?

*ನಾವು ಹಾಗೆ ಮಾಡಲಿಲ್ಲ. ನಮಗೆ ಸಂವೇದನೆಯಿದೆ. ನಮ್ಮ ರಾಜ್ಯವನ್ನು ಸರ್ವತೋಮುಖವಾಗಿ ಬೆಳೆಸುವ ಉದ್ದೇಶವಿದೆ. ಹಾಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇದುವರೆಗೆ 1.16 ಲಕ್ಷ ಕೋಟಿಗೂ ಅಧಿಕ ಅನುದಾನ ಒದಗಿಸಿದ್ದೇವೆ. ನಮ್ಮ ಗ್ಯಾರಂಟಿಉ ಯೋಜನೆಗಳಿಂದ ನಮ್ಮ ಜನರ ಕೊಂಡು ಕೊಳ್ಳುವ ಶಕ್ತಿ ಆರೋಗ್ಯಕರವಾಗಿದೆ. ನೀವು ಬಡವರ, ಮಧ್ಯಮ ವರ್ಗದವರ ವಿರೋಧಿಗಳು ಹಾಗಾಗಿ ಇದು ನಿಮಗೆ ಕಾಣುವುದಿಲ್ಲ.

*ಪಶುಪಾಲಕರ ಕುರಿ- ಮೇಕೆ, ಎತ್ತು ಎಮ್ಮೆ ಹಸು ಕೋಣ ಮರಣ ಹೊಂದಿದರೆ ಪರಿಹಾರ ಕೊಡುತ್ತಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ರಿ, ಕೃಷಿ ಭಾಗ್ಯ ಯೋಜನೆ ನಿಲ್ಲಿಸಿದ್ರಿ ಆಗ ನಿಮಗೆ ಸಂವೇದನೆ ಎಂಬುದು ನೆನಪಾಗಲಿಲ್ವೆ?

*ಆಗ ನಿಮ್ಮ ಆಡಳಿತ ಹದಗೆಟ್ಟಿರಲಿಲ್ಲವೆ? ಆಗ ದಲಿತರು ಹಿಂದುಳಿದ ವರ್ಗಗಳ ನೆನಪಾಗಿರಲಿಲ್ಲವೆ?

*ನಾವು ದಲಿತ ಸಮುದಾಯದ ಆತಂಕಇದು ಕೇಳಿಸಿಕೊಂಡಿದ್ದೇವೆ.ಅದಕ್ಕೆ ಸ್ಪಂದಿಸಿದ್ದೇವೆ. ಅದಕ್ಕಾಗಿಯೇ ದಲಿತರ ಭೂಮಿ ಬಲಾಢ್ಯರ ಕೈಗೆ ಹೋಗಬಾರದು ಎಂಬ ಕಾರಣದಿಂದ ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ.

*ಸಂವೇದನಾ ಶೀಲ ಸರ್ಕಾರ ಆಗಿರುವುದರಿಂದಲೇ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತರ ಮನವಿಗೆ ಮಣಿದು ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದೇವೆ. ನಿಮ್ಮ ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಆದರು ಆಗಿದ್ದಾಗ ರೈತರಿಗೆ ಗೊಬ್ಬರ ಕೊಡಲಾಗದೆ ಹಾವೇರಿಯಲ್ಲಿ ಗೋಲಿಬಾರ್‌ ಮಾಡಿ ರೈತರನ್ನು ಕೊಂದು ಹಾಕಲಾಯಿತು.ಆದರೆ ಮುಧೋಳದಲ್ಲಿ ರೈತರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಟ್ರ್ಯಾಕ್ಟರ್‌ ಮುಂತಾದ ವಾಹನ, ರೈತರ ಕಬ್ಬಿಗೆ ಬೆಂಕಿ ಹಚ್ಚಿದಾಗಲೂ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಿದ್ದೇವೆಯೇ ಹೊರತು ನಾವು ಗೋಲಿಬಾರ್‌ ಮಾಡಿ ಕೊಲ್ಲಲು ಹೋಗಲಿಲ್ಲ.

ಕಬ್ಬು ಬೆಳೆಗಾರರ ಸಮಸ್ಯೆ ಬಂದಾಗಲೂ ಸಹ ಸ್ವತಃ ನಾನು ಕಾರ್ಖಾನೆಗಳ ಮಾಲೀಕರು, ರೈತ ಸಂಘಟನೆಗಳ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ಮಾಡಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಇಂದು ಕಬ್ಬಿಗೆ ಸಿಗುತ್ತಿರುವ ಬೆಲೆಯಿಂದ ರೈತರಿಗೆ ಸಂತೋಷವಾಗಿದೆ.

ಹಾಗೆಯೇ, ರಾಜ್ಯದಲ್ಲಿ ದಾಖಲೆ ಪ್ರಮಾಣದ ಮುಸುಕಿನ ಜೋಳವನ್ನು ರೈತರು ಬೆಳೆದಿದ್ದಾರೆ. ಇಡೀ ದೇಶದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿತ್ತು. ಕ್ವಿಂಟಾಲ್‌ ಜೋಳದ ಬೆಲೆ 1500-1600 ಬಂದಾಗ ರೈತರು ಸಹಜವಾಗಿಯೇ ಆತಂಕಗೊಂಡರು. ಕೇಂದ್ರ ಸರ್ಕಾರ ಎಂಎಸ್‌ಪಿ ಯಲ್ಲಿ ಕ್ವಿಂಟಾಲ್‌ಗೆ 2400 ನಿಗದಿಪಡಿಸಿದೆ. ಆದರೆ ಮಾರುಕಟ್ಟೆಯಲ್ಲಿ 1500-1600 ಬಂದಾಗಲೂ ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಸ್ವತಃ ರಾಜ್ಯ ಸರ್ಕಾರವೆ ಹಲವಾರು ಸಭೆಗಳನ್ನು ಮಾಡಿ ಕೆಎಂಎಫ್‌ ಮೂಲಕ ಖರೀದಿಸಲು ಹಾಗೂ ಎಥೆನಾಲ್‌ ಉತ್ಪಾದಕರು, ಪೌಲ್ಟ್ರಿ, ಪಶು ಆಹಾರ ತಯಾರಕರ ಜೊತೆ ಸಭೆ ಮಾಡಿ ಮೆಕ್ಕೆಜೋಳ ಖರೀದಿಸುವಂತೆಜೋಶಿಯವರು ನಿರ್ದೇಶನ ನೀಡಲಾಯಿತು. ಆದರೆ ಕೇಂದ್ರ ಸರ್ಕಾರದ ಆಹಾರ ಸಚಿವರಾದ ಪ್ರಹ್ಲಾದ ಜೋಷಿಯವರ ನಿಯಂತ್ರಣದಲ್ಲಿರುವ ಎಥೆನಾಲ್‌ ಕಂಪನಿಗಳಿಗೆ ಮೆಕ್ಕೆಜೋಳವನ್ನು ಮೇ ತಿಂಗಳಲ್ಲಿ ಹೆಚ್ಚು ಖರೀದಿಸುವಂತೆ ಮಾಡಿದರೆ ಹೊರತು, ರೈತರ ಕಷ್ಟದ ಸಮಯದಲ್ಲಿ ಸರಿಯಾಗಿ ಕೈಕೊಟ್ಟರು. ಆದರೆ,ನೀಡುವುದರಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಸಹಕಾರ ನೀಡದಿದ್ದಾಗಲು ಒಂದು ಕ್ವಿಂಟಾಲ್‌ ಜೋಳಕ್ಕೆ 250 ವರೆಗೆ ಪ್ರೋತ್ಸಾಹ ಧನದ ನೀಡುವುದರ ಮೂಲಕ ಸುಮಾರು 40 ಲಕ್ಷ ಕ್ವಿಂಟಾಲ್‌ ಜೋಳ ಖರೀದಿ ಮಾಡಲಾಗುತ್ತಿದೆ. ಕಳೆದ ಬಾರಿ ಮಾವಿನ ಬೆಲೆ ಕುಸಿದಿತ್ತು. ಆಗಲೂ ಸಹ ಸರ್ಕಾರ ಪಿಡಿಪಿಎಸ್‌ ಯೋಜನೆಯಲ್ಲಿ 41 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನ ನೀಡಿ ರೈತರ ನೆರವಿಗೆ ನಿಂತಿತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಕೊಬ್ಬರಿ ಬೆಲೆ ಕುಸಿದಿದ್ದಾಗ, ತೊಗರಿಗೆ ನೆಟೆ ರೋಗ ಬಂದಿದ್ದಾಗ ಸರ್ಕಾರ ರೈತರ ನೆರವಿಗೆ ನಿಂತಿತ್ತು. ಆದರೆ, ನೀವು ನಮ್ಮ ಸರ್ಕಾರಕ್ಕೆ ಸಂವೇದನೆ ಇಲ್ಲ ಎಂದು ಭಾಷಣ ಮಾಡುತ್ತೀರಿ.

ಸುನೀಲ್ ಕುಮಾರ್ ಅವರು ಪ್ರಕೃತಿ ವಿಕೋಪಕ್ಕೆ ಅನುದಾನ ಬಿಡುಗಡೆ ಆಗಿಲ್ಲ ಅಂತ ಹೇಳಿದ್ದಾರೆ. ಕಳೆದ ತಿಂಗಳು 250 ಕೋಟಿ ಬಿಡುಗಡೆ ಮಾಡಿದ್ದೇವೆ. ಮುಖ್ಯಮಂತ್ರಿಗಳ ವಿಶೇಷ ಅನುದಾದಡಿ 2445 ಕೋಟಿ ಬಿಡುಗಡೆ ಮಾಡಿದ್ದೇವೆ. ನಮ್ಮ ಸರ್ಕಾರ ಅಲ್ಲ ದಿವಾಳಿ ಆಗಿರುವುದು. ಕೇಂದ್ರ ಸರ್ಕಾರ ದಿವಾಳಿ ಆಗಿರುವುದು. ನೆನ್ನೆ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ್ದಾರೆ. ಮನೆಗಳ ನಿರ್ಮಾಣಕ್ಕೆ 19,490 ಕೋಟಿ ಇದ್ದದ್ದು, ಪರಿಷ್ಕೃತ ಅಂದಾಜಿನಲ್ಲಿ 7500 ಕೋಟಿಗೆ ಇಳಿಸಿದ್ದಾರೆ. ಈ ವರ್ಷ 18650 ಕೋಟಿ ಇಟ್ಟಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಬಜೆಟ್ನಲ್ಲಿ 8260 ಕೋಟಿ ಇಟ್ಟು, ಪರಿಷ್ಕರಣೆ ಮಾಡಿ 6372 ಕೋಟಿ ಮಾಡಿದ್ದಾರೆ. 2026-27 ರಲ್ಲಿ 6587 ಕೋಟಿಗೆ ಇಳಿಸಿದ್ದಾರೆ. ಪಿಎಂ ಇಂಟರ್ನ ಶಿಪ್ ಪ್ರೋಗ್ರಾಂ ನಲ್ಲಿ 10831 ಕೋಟಿ ಇಟ್ಟಿದ್ದರು, ಅದನ್ನು 526 ಕೋಟಿಗೆ ಪರಿಷ್ಕರಣೆ ಮಾಡಿದ್ದಾರೆ. ಈ ವರ್ಷ 4482 ಕೋಟಿ ಇಟ್ಟಿದ್ದಾರೆ. ನೀವು ಎಲೆಕ್ಷನ್ ಸಮಯದಲ್ಲಿ ಬಹಳ ಪಿಎಂ ವಿಶ್ವಕರ್ಮ ಯೋಜನೆ 5100 ಕೋಟಿಯಿಂದ 3861 ಕೋಟಿಗೆ ಬಂದಿದೆ.

Related Articles

Back to top button