Kannada NewsKarnataka NewsLatest

*ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಮಣಿಪುರ ಯುವತಿ ಬಲಿ*

ಪ್ರಗತಿವಾಹಿನಿ ಸುದ್ದಿ: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿ ಹೋಗುತ್ತಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಣಿಪುರ ಮೂಲದ ಯುವತಿ ಹನ್ನಾ ಇನಕಾ ಮೃತ ಯುವತಿ. ಮಣಿಪುರದಿಂದ ಬೆಂಗಳೂರಿಗೆ ಕೆಲಸಕ್ಕಾಗಿ ಬಂದಿದ್ದಳು. ಕೆ.ಆರ್.ಪುರಂ ರೈಲು ನಿಲ್ದಾಣದ ಬಳಿ ಬಿಎಂಟಿಸಿ ಬಸ್ ಬೈಕ್ ಗೆ ಹಿಂಬಡಿಯಿಂದ ಬಂದು ಡಿಕ್ಕಿ ಹೊಡೆದಿದೆ.

ಬೈಕ್ ನಲ್ಲಿ ಹಿಂಬದಿ ಕುಳಿದಿದ್ದ ಯುವತಿ ಕೆಳಗೆ ಬಿದ್ದು, ಬಸ್ ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾಳೆ. ಯುವತಿಯ ತಲೆಯ ಮೇಲೆಯೇ ಬಸ್ ಹರಿದುಹೋಗಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ರ್ಯಾಶ್ ಡ್ರೈವ್ ನಿಂದ ಅಪಘಾತ ಸಂಭವಿಸಿದ್ದು, ಯುವತಿ ಸಾವನ್ನಪ್ಪಿದ್ದಾಳೆ.

Home add -Advt

Related Articles

Back to top button