Belagavi NewsBelgaum NewsKarnataka NewsLatestPolitics

*ಮಾಜಿ ಸೈನಿಕರ ಸಂಘಕ್ಕೆ ಜಾಗ ಮಂಜೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿಯ ಜೈ ಗಣೇಶ ಎಕ್ಸ್ -ಸರ್ವಿಸ್ ಮ್ಯಾನ್ ಅಸೋಸಿಯೇಷನ್ (ಸರಸ್ವತಿ ನಗರ) ಕಟ್ಟಡ ನಿರ್ಮಾಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜಾಗವನ್ನು ಮಂಜೂರು ಮಾಡಿಸಿ ಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ಸೋಮವಾರ ಅಸೋಸಿಯೇಷನ್ ಅಧ್ಯಕ್ಷರಾದ ಗಣಪತ್ ದೇಸಾಯಿ ಅವರ ನೇತೃತ್ವದ ಮಾಜಿ ಸೈನಿಕರು ಗೃಹ ಕಚೇರಿಗೆ ಆಗಮಿಸಿ, ಕೃತಜ್ಞತೆ ಸಲ್ಲಿಸಿ ಸಚಿವರನ್ನು ಸನ್ಮಾನಿಸಿದರು.

ಕಳೆದ 2 ವರ್ಷಗಳಿಂದ ಮಾಜಿ ಸೈನಿಕರು ಜಾಗಕ್ಕಾಗಿ ಪ್ರಯತ್ನಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಕಟ್ಟಡಕ್ಕಾಗಿ ಜಾಗವನ್ನು ಮಂಜೂರು ಮಾಡಿಸಿ ಕೊಟ್ಟಿದ್ದಾರೆ. ದೇಶದ ರಕ್ಷಣೆಗಾಗಿ ಜೀವನವನ್ನೇ ಸವೆಸಿದ ಈ ವೀರ ಯೋಧರ ಕಲ್ಯಾಣಕ್ಕಾಗಿ ಶ್ರಮಿಸುವುದು ನನ್ನ ಆದ್ಯ ಕರ್ತವ್ಯ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಅನೇಕ ಮಾಜಿ ಸೈನಿಕರು ಮತ್ತು ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Home add -Advt

Related Articles

Back to top button