Kannada NewsKarnataka NewsLatest

ಕಿರಣ ಜಾಧವ ಜನ್ಮದಿನ: ಅಂಧ ಮಕ್ಕಳಿಗೆ ಉಪಹಾರ ವ್ಯವಸ್ಥೆ, ವಿವೇಕಾನಂದ ಜಯಂತಿ: ಆಯುಷ್ಮಾನ್ ಕಾರ್ಡ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬಿಜೆಪಿ ಮುಖಂಡ ಕಿರಣ ಜಾಧವ ಇಂದು ತಮ್ಮ ಜನ್ಮ ದಿನ ಹಾಗೂ ವಿವೇಕಾನಂದರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ನಗರದ ಮಹೇಶ್ವರ ಅಂಧ ಮಕ್ಕಳ ಶಾಲೆಯಲ್ಲಿ ಅಲ್ಲಿನ ಮಕ್ಕಳಿಗೆ ಇಂದು ಬೆಳಗಿನ ಉಪಹಾರ ವ್ಯವಸ್ಥೆ ಮಾಡಿದ್ದ ಕಿರಣ ಜಾಧವ ಅಲ್ಲಿಯೇ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನೂ ಆಯೋಜಿಸಿದ್ದರು.

ಸುಮಾರು 300 ಜನರಿಗೆ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ ಕಾರ್ಡಗಳನ್ನು ವಿತರಿಸಲಾಯಿತು. ವಿವೇಕಾನಂದರ ಆದರ್ಶಗಳನ್ನು ಮಕ್ಕಳು ಅಳವಡಿಸಿಕೊಳ್ಳಬೇಕು. ಅವರು ಯುವಕರಿಗೆ ರೋಲ್ ಮಾಡೆಲ್ ಆಗಬೇಕು ಎಂದ ಜಾಧವ್, ಇಲ್ಲಿನ ಮಕ್ಕಳು ಯಾವುದಕ್ಕೂ ಹಿಂಜರಿಯುವ ಅವಶ್ಯಕತೆ ಇಲ್ಲ. ಅವರ ಉತ್ಸಾಹ, ಚೈತನ್ಯ ಇತರರಿಗೇ ಮಾದರಿಯಾಗುವಂತಿದೆ ಎಂದರು.

ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆಯ ಕಾರ್ಡ್ ಗಳನ್ನು 3 ತಿಂಗಳಿನಿಂದ ವಿತರಿಸುತ್ತ ಬಂದಿದ್ದೇನೆ. ಇದರಿಂದ ಬಡವರಿಗೆ, ಶ್ರೀಸಾಮಾನ್ಯರಿಗೆ ಅನುಕೂಲವಾಗಲಿದೆ. ತಪ್ಪದೆ ಎಲ್ಲರೂ ಕಾರ್ಡ ಪಡೆದುಕೊಳ್ಳಬೇಕು ಎಂದೂ ಕಿರಣ ಜಾಧವ ಕರೆ ನೀಡಿದರು.

ಬೆಳಗಾವಿ ಜಿಲ್ಲಾ ಅಂಧರ ಸಂಘದ ಅಧ್ಯಕ್ಷ ವಿಕಾಸ ಕಲಘಟಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅರವಿಂದ ಉದೋಶಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪ್ರಭಾಕರ ನಾಗರಮುನೋಳಿ ಅತಿಥಿಗಳನ್ನು ಪರಿಚಯಿಸಿದರು.  ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ವಿವೋಕಾನಂದರ ಕುರಿತು ವಿದ್ಯಾರ್ಥಿ ಸಿದ್ದಪ್ಪ ತೋರಣಗಟ್ಟಿ ಮಾತನಾಡಿದನು. ಬೆಂಬಳಗಿ, ಗ್ರಾಮೋಪಾಧ್ಯಾಯ ಮೊದಲಾದವರಿದ್ದರು. ಮುಖ್ಯಾಧ್ಯಾಪಕರಾದ ಎ.ಎಂ.ಗಾವಡೆ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button