Kannada NewsKarnataka NewsLatest

*ಉಪಲೋಕಾಯುಕ್ತರಿಗೆ ಆನ್ ಲೈನ್ ಕಂಪನಿಯಿಂದ ದೋಖಾ: ಆರ್ಡರ್ ಕೊಟ್ಟಿದ್ದೇ ಒಂದು ; ಪಾರ್ಸೆಲ್ ನಲ್ಲಿ ಬಂದಿದ್ದೇ ಮತ್ತೊಂದು!*

ಪ್ರಗತಿವಾಹಿನಿ ಸುದ್ದಿ: ಉಪಲೋಕಾಯುಕ್ತರಿಗೇ ಆನ್ ಲೈನ್ ನಲ್ಲಿ ದೋಖಾ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಉಪ ಲೋಕಾಯುಕ್ತರು ಆರ್ಡರ್ ಮಾಡಿದ್ದು ಒಂದು, ಪಾರ್ಸಲ್ ನಲ್ಲಿ ಬಂದಿದ್ದೇ ಮತ್ತೊಂದು ವಸ್ತು.

ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಆನ್ ಲೈನ್ ನಲ್ಲಿ ಬ್ಲೇಡ್ ಆರಡರ್ ಕೊಟ್ಟಿದ್ದರಂತೆ. ಆದರೆ ಅವರಿಗೆ ಬಂದ ಪಾರ್ಸಲ್ ನಲ್ಲಿ ಇದ್ದಿದ್ದು ಹಳೇ ಬಟ್ಟೆ. ರೇಜರ್ ಬ್ಲೇಡ್ ಬದಲಾಗಿ ಹಳೇ ಬಟ್ಟೆಗಳನ್ನು ಕೊಟ್ಟು ವಂಚಿಸಲಾಗಿದೆ.

ಉಪಲೋಕಾಯುಕ್ತರು ಫೆ.೪ರಂದು ಗುಡ್ ಮ್ಯಾಕ್ ಕಂಪನಿಯ ವೆಬ್ ಸೈಟ್ ಮೂಲಕವಾಗಿ ಪುರುಷರ ರೇಜರ್ ಬ್ಲೇಡ್ ಆರ್ಡರ್ ಕೊಟ್ಟಿದ್ದರು. ಫೆ.9ರಂದು ಶ್ಯಾಡೋಫಾಕ್ಸ್ ಸರ್ಫೇಸ್ ಲಾಜೆಸ್ಟಿಕ್ ಕಂಪನಿಯ ಪ್ರತಿನಿಧಿ ವಿಜಯ್ ಎಂಬಾತ ಫಣೀಂದ್ರ ಅವರಿಗೆ ಕರೆ ಮಾಡಿ ಆರ್ಡರ್ ಕೊಟ್ಟ ವಸ್ತು ಬಂದಿದೆ ಎಂದು ತಿಳಿಸಿದ್ದಾನೆ. ಫಣೀಂದ್ರ ಅವರು ಕಚೇರಿಯಲ್ಲಿದ್ದುದರಿಂದ ಪಾರ್ಸೆಲ್ ಮನೆಯ ವಿಳಾಕ್ಕೆ ಕೊಡುವಂತೆ ಹೇಳಿದ್ದಾರೆ. ಪಾರ್ಸೆಲ್ ಕೊಟ್ಟು 699 ರೂಪಾಯಿ ಹಣ ಪಡೆದು ಹೋಗಿದ್ದಾನೆ.

ಸಂಜೆ ಮನೆಗೆ ಬಂದು ಪಾರ್ಸಲ್ ತೆಗೆದು ನೋಡಿದರೆ ಉಪಲೋಕಾಯುಕ್ತರಿಗೆ ಶಾಕ್ ಆಗಿದೆ. ಪಾರ್ಸೆಲ್ ನಲ್ಲಿ ಬ್ಲೇಡ್ ಬದಲಾಗಿ ಹಳೆ ಬಟ್ಟೆಗಳಿವೆ. ತಕ್ಷಣ ಪಾರ್ಸೆಲ್ ಕೊಟ್ಟ ವಿಜಯ್ ನನ್ನು ಸಂಪರ್ಕಿಸಿದರೆ ಆತ ಪಾರ್ಸೆಲ್ ಒಳಗಿರುವ ವಸ್ತುಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಂಪನಿ ಕೊಟ್ಟ ಪಾರ್ಸೆಲ್ ನ್ನು ತಲುಪಿಸುವುದಷ್ಟೇ ನಮ್ಮ ಕೆಲಸ ಕಂಪನಿಗೆ ಕರೆ ಮಾಡಿ ಎಂದಿದ್ದಾನೆ. ಆನ್ ಲೈನ್ ಕಂಪನಿಯ ವಂಚನೆಗೆ ಪೇಚಿಗೆ ಸಿಲುಕಿದ ಉಪಲೋಕಾಯುಕ್ತರು ಕಂಪನಿ ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt


Related Articles

Back to top button