Belagavi NewsBelgaum NewsKannada NewsKarnataka NewsLatest

*ಅನುದಾನಿತ ನೌಕರರು ಸಂಘಟಿತರಾಗದಿದ್ದರೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ: ರಾಮು ಗುಗವಾಡ ಕಳವಳ*

ಪ್ರಗತಿವಾಹಿನಿ ಸುದ್ದಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳ ನಿರ್ದೆಶನದಂತೆ ಸರ್ಕಾರ ತೆಗೆದುಕೊಳ್ಳುತ್ತಿರುವ ದುಡುಕಿನ ನಿರ್ಧಾರಗಳು ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಸಂಕಷ್ಟಕ್ಕೀಡು ಮಾಡುತ್ತಿವೆ. ಅನುದಾನಿತ ಶಾಲಾ ಕಾಲೇಜುಗಳ ನೌಕರರು ಸಂಘಟಿತರಾಗಿ ಇದರ ಬಗ್ಗೆ ಪ್ರಶ್ನಿಸದಿದ್ದರೆ ಮುಂದೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮುಚ್ಙುವ ಷಡ್ಯಂತ್ರ ತೆರೆಮರೆಯಲ್ಲಿ ನಡೆಯುತ್ತಿದೆ ಇದರ ಬಗ್ಗೆ ನೌಕರರು ಜಾಗೃತರಾಗಬೇಕು ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಗೌರವಾಧ್ಯಕ್ಷ ರಾಮು ಗುಗವಾಡ ಹೇಳಿದರು.

Home add -Advt

ನಗರದ ಸರಕಾರಿ ನೌಕರರ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಬೆಳಗಾವಿ ತಾಲೂಕು ಗ್ರಾಮೀಣ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಸಂಘದ ಜಿಲ್ಲಾಧ್ಯಕ್ಷ ಬಸವರಾಜ . ಹಳಿಂಗಳಿ.ಮಾತನಾಡಿ ಹಳೆಯ ನಿಶ್ಚಿತ ಪಿಂಚಣಿ ಜಾರಿ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳದಿದ್ದರೆ ಶೀಘ್ರ ದೊಡ್ಡ ಮಟ್ಟದ ಹೋರಾಟಕ್ಕೆ ಕರೆ ನೀಡಲಾಗುವುದು ಅನುದಾನಿತ ಶಾಲೆ ಕಾಲೇಜುಗಳ ಎಲ್ಲ ನೌಕರರು ಸಂಘದ ಕರೆಗೆ ಸ್ಪಂದಿಸಿ ಸಂಘಟನೆಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.


ಜಿಲ್ಲಾ ಗೌರವಾಧ್ಯಕ್ಷ ಮುತ್ತುರಾಜ ಮತ್ತಿಕೊಪ್ಪ, ಪ್ರಮುಖರಾದ ಬಾಳಗೌಡ ಕರಲಿಂಗನವರ, ಶಂಕರ ಕಳಸಣ್ಣವರ ಮಾತನಾಡಿದರು. ಬೆಳಗಾವಿ ಗ್ರಾಮೀಣ ಘಟಕದ ನೂತನ ಅಧ್ಯಕ್ಷ ರಾಜು ಪಾಟೀಲರವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.


ಗಣಪತಿ ಮಾಸ್ತ ಮರಡಿ, ರಾಜು ಮುದ್ದೆವ್ವಗೋಳ, ಲಗಮಪ್ಪ ಹೊನ್ನಪ್ಪಗೋಳ, ಶಂಕರ ಎಂಟೆತ್ತಿನವರ ಸೇರಿದಂತೆ ಬೆಳಗಾವಿ ಗ್ರಾಮೀಣ ಭಾಗದ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಸ್.ಎ.ಮಾಮೂಲದಾರ ನಿರೂಪಿಸಿ ಸ್ವಾಗತಿಸಿದರು. ಪದ್ಮಾವತಿ ಜೋಶಿ ವಂದಿಸಿದರು.

Related Articles

Back to top button