Kannada NewsLatestNational

*ಭೀಕರ ಬೆಂಕಿ ದುರಂತ: ಅವಳಿ ಮಕ್ಕಳು ಸೇರಿ 6 ಜನರು ಸಜೀವದಹನ*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಐವರು ಮಕ್ಕಳು ಸೇರಿ ಆರು ಜನರು ಸಜೀವದಹನವಾಗಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೀರತ್​​ನಲ್ಲಿ ಈ ದುರಣ್ತ ಸಂಭವಿಸಿದೆ. ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ತಗುಲಿದ ಬೆಂಕಿ ಆರು ಜನರನ್ನು ಬಲಿ ಪಡೆದಿದೆ. ಮೃತರಲ್ಲಿ ಇಬ್ಬರು ಅವಳಿ ಶಿಶುಗಳು ಸೇರಿದ್ದಾರೆ.

ಇಕ್ಬಾಲ್ ಎಂಬುವವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿರುಚಾಟ, ಬೆಂಕಿ ನೋಡಿ ಸ್ಥಳೀಯರು ಕೂಡಲೇ ಸಹಾಯಕ್ಕೆ ಮುಂದಾದರು. ಬೆಂಕಿಯು ಕೆಳ ಮಹಡಿಯಿಂದ ಮನೆಯ ಮೇಲಿನ ಮಹಡಿಗೆ ವೇಗವಾಗಿ ಹಬ್ಬಿತ್ತು, ಕುಟುಂಬ ಸದಸ್ಯರು ಮನೆಯ ಒಳಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.

ಸದ್ಯ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Home add -Advt


Related Articles

Back to top button