
ಪ್ರಗತಿವಾಹಿನಿ ಸುದ್ದಿ: ರಂಗತ್ ನಿಂದ ಹಾರಾಟ ನಡೆಸಿದ್ದ ವಿಮಾನವೊಂದು ಅಂಡಮಾನ್ ಸಮುದ್ರದಲ್ಲಿ ಪತನಗೊಂಡಿರುವ ಘಟನೆ ನಡೆದಿದೆ.
ರಂಗತ್ ನಿಂದ ಹಾರಾಟ ನಡೆಸಿದ್ದ ವಿಮಾನ ಮಾಯಾಬಂದರ್ ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಇಂದು ಬೆಳಿಗ್ಗೆ 9:30ರ ಸುಮಾರಿಗೆ ಸಮುದ್ರದಲ್ಲಿ ಪತನಗೊಂಡಿದೆ.
ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಹಾಗೂ ಐವರು ಪ್ರಯಾಣಿಕರಿದ್ದರು.ಎಲ್ಲಾ ಏಳು ಜನರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ವಿಮಾನದ ಮೂಲಕ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


