Belagavi NewsBelgaum NewsKannada NewsKarnataka NewsLatestNational
*ಐಆರ್‌ಸಿಟಿಸಿ ನಿರ್ದೇಶಕರಾಗಿ ಸಚಿನ್ ಸಬ್ನಿಸ್ ನೇಮಕ*

ಐಆರ್‌ಸಿಟಿಸಿ ನಿರ್ದೇಶಕರಾಗಿ ಸಚಿನ್ ಸಬ್ನಿಸ್ ನೇಮಕ
3 ವರ್ಷ ಅವಧಿಗೆ ಕೇಂದ್ರ ಸರ್ಕಾರದ ಆದೇಶ
ಪ್ರಗತಿವಾಹಿನಿ ಸುದ್ದಿ/ ನವದೆಹಲಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (IRCTC) ಮಂಡಳಿಯ ನಿರ್ದೇಶಕರಾಗಿ ಬೆಳಗಾವಿಯ ಉದ್ಯಮಿ ಸಚಿನ್ ಬಾಲಕೃಷ್ಣ ಸಬ್ನಿಸ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ರಾಷ್ಟ್ರಪತಿಗಳ ಆದೇಶದಂತೆ ಸಚಿನ್ ಸಬ್ನಿಸ್ ಅವರನ್ನು ಐಆರ್‌ಸಿಟಿಸಿ ಮಂಡಳಿಯ ನಿರ್ದೇಶಕರಾಗಿ ನೇಮಿಸಲಾಗಿದೆ.
ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬರಲಿದ್ದು, 3 ವರ್ಷಗಳ ಅವಧಿಗೆ ಇರಲಿದೆ. ಅಥವಾ ಮುಂದಿನ ಆದೇಶದವರೆಗೆ – ಇವೆರಡರಲ್ಲಿ ಯಾವುದು ಮೊದಲು ಬರುತ್ತದೋ ಅಲ್ಲಿಯವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
IRCTC ಭಾರತೀಯ ರೈಲ್ವೆಯ ಅಡುಗೆ, ಆಹಾರ, ಆನ್‌ಲೈನ್ ಟಿಕೆಟ್ ಬುಕಿಂಗ್ ಮತ್ತು ಪ್ರವಾಸೋದ್ಯಮ ಸೇವೆಗಳನ್ನು ನೋಡಿಕೊಳ್ಳುವ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ.




