*ಕೆಎಲ್ಇ ಆಯುರ್ವೇದ ಕಾಲೇಜು ವತಿಯಿಂದ ವೈದ್ಯರಿಗಾಗಿ ನಿರಂತರ ವೈದ್ಯಕೀಯ ಶಿಕ್ಷಣ*

ಪ್ರಗತಿವಾಹಿನಿ ಸುದ್ದಿ: ಕೆಎಲ್ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ವೈದ್ಯರಿಗಾಗಿ ನಿರಂತರ ವೈದ್ಯಕೀಯ ಶಿಕ್ಷಣ (ಅಒಇ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜೀವನಶೈಲಿ ಮತ್ತು ಚಯಾಪಚಯ ಕಾಯಿಲೆಗಳನ್ನು ಆಯುರ್ವೇದ ಚಿಕಿತ್ಸೆಗಳ ಮೂಲಕ ನಿರ್ವಹಣೆಯ ಕುರಿತು ಇಂದಿನ ಯುವ ವೈದ್ಯರಿಗೆ ಅರಿತುಕೊಳ್ಳಲು ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನದ ಕಣಜಗಳೊಗಿವೆ. ಇವುಗಳ ಸದುಪಯೋಗ ಪಡೆದುಕೊಳ್ಳುವದು ವೈದ್ಯರ ಜವಾಬ್ದಾರಿಯಾಗಿವೆ ಎಂದು ಕೆ ಎಲ್ ಇ ಕಾಲೇಜಿನ ಪ್ರಾಚಾರ್ಯರು ಡಾ.ಕಿರಣಕುಮಾರ ಮುತ್ನಾಳಿ ಅವರು ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ಅಧಿವೇಶನಗಳಲ್ಲಿ ಡಾ. ಶ್ರೀಧರ್ ಎಸ್. ಲಕ್ಕುಂಡಿ ಅವರು ಮೆಟಬಾಲಿಕ್ ಸಿಂಡ್ರೋಮ್ ಮತ್ತು ಪಂಚಕರ್ಮದ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಡಾ. ಕಂಚನಾ ಸಾಗರ ಅವರು ಮೆಟಬಾಲಿಕ್ ಸಿಂಡ್ರೋಮ್ ಕುರಿತು ಪ್ರಕರಣ ಅಧ್ಯಯನ ಮಂಡಿಸಿದರು.
ಡಾ. ಹರಿಶಂಕರ್ ಪಿ.ವಿ. ಅವರು ಗುದಗತ ಸಂಬಂಧಿತ ರೋಗಗಳ ಚಿಕಿತ್ಸೆಯಲ್ಲಿ ಇತ್ತೀಚಿನ ಅಭಿವೃದ್ಧಿಗಳ ಬಗ್ಗೆ ವಿವರಿಸಿದರು.
ಡಾ. ಅಶ್ವಿನಿ ಕುಂಬಾರ ಅವರು ಡಯಾಬಿಟಿಕ್ ರೆಟಿನೋಪಥಿಗೆ ಆಯುರ್ವೇದ ಚಿಕಿತ್ಸಾ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಡಾ. ಡಿ.ಆರ್. ಮುಧೋಳ ಅವರನ್ನು ಸನ್ಮಾನಿಸಲಾಯಿತು. ‘ಪ್ರಗತಿ – ಎ ನ್ಯೂಸ್’ ಮಾಸಪತ್ರಿಕೆಯ ೨ ಮತ್ತು ೩ನೇ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಮಹಾಜನ, ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮತ್ತು ಸ್ಥಳೀಯ ವೈದ್ಯರು ಭಾಗವಹಿಸಿದರು. ಕಾರ್ಯಕ್ರಮವನ್ನು ಡಾ. ನಿಹಾರಿಕಾ ನಿರೂಪಿಸಿದರು. ಡಾ. ಸೂರಜ ಕುಂಬಾರ ವಂದಿಸಿದರು.



