Belagavi NewsBelgaum NewsKannada NewsKarnataka NewsNationalPolitics
*ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಕೇಸ್ ದಾಖಲಿಸಿದ ಮಾರಿಹಾಳ ಠಾಣೆ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣದ ದಾಖಲಿಸಿ ಬೆಳಗಾವಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಭರತ ರತ್ನಾಜಿ ಮುತಗೇಕರ (29) ಎಂಬುವರು ಮುತಗಾ ಗ್ರಾಮ ಬಳಿಯ ಭಾರತ ಪೆಟ್ರೋಲ್ ಪಂಪ್ ಸಮೀಪ ಇರುವ ಬೆಳಗಾವಿ-ಬಾಗಲಕೋಟ ರಸ್ತೆ ಪಕ್ಕದ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಸರಾಯಿ ಸೇವನೆ ಮಾಡುವ ವೇಳೆ ಮಾರಿಹಾಳ ಪೊಲೀಸರು ದಾಳಿ ಮಾಡಿ, ಆರೋಪಿತನಿಂದ ಒರಿಜಿನಲ್ ಚಾಯಿಸ್ ವಿಸ್ಕಿ ಹಾಗೂ ಗ್ಲಾಸ್ ಜಪ್ತ ಮಾಡಿಕೊಂಡಿದ್ದಾರೆ.
ಆರೋಪಿ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.25/2026 ಕಲಂ.15(A), 32(3) ಅಬಕಾರಿ ಕಾಯ್ದೆ-1965 ನೇದ್ದರ ಪ್ರಕಾರ ಪ್ರಕರಣ ದಾಖಲಾಗಿಸಿಕೊಂಡು, ಕಾನೂನು ಕ್ರಮ ಜರುಗಿಸಲಾಗಿದೆ.
ಆರೋಪಿತನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ದಾಳಿ ಕೈಗೊಂಡ ಎಎಸ್ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.



