
ಪ್ರಗತಿವಾಹಿನಿ ಸುದ್ದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) 5 ಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.
ಒಟ್ಟು 369 ವಾರ್ಡ್ಗಳಿಗೆ ನಗರಾಭಿವೃದ್ದಿ ಇಲಾಖೆ ಮೀಸಲಾತಿ ಅಂತಿಮಗೊಳಿಸಿದ್ದು, ಈ ಪೈಕಿ 176 ವಾರ್ಡ್ಗಳು ಮಹಿಳೆಯರಿಗೆ ಮೀಸಲಾಗಿವೆ. ಕರಡು ಪಟ್ಟಿಗೆ ಸಾರ್ವಜನಿಕರಿಂದ ವ್ಯಕ್ತವಾಗಿದ್ದ ಸಲಹೆ ಮತ್ತು ಸೂಚನೆಗಳ ಜೊತೆಗೆ ಸರ್ಕಾರದ ಜೊತೆಗೂ ಕೆಲ ವಿಚಾರಗಳನ್ನು ಚರ್ಚಿಸಿ, ಸೂಕ್ತವಾದವುಗಳನ್ನು ಆಯ್ದುಕೊಂಡು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ:
ಒಟ್ಟು ವಾರ್ಡ್ಗಳ ಸಂಖ್ಯೆ – 63
SC – 11 (5 ಮಹಿಳೆ)
ST – 1
ಹಿಂದುಳಿದ ವರ್ಗ(A) – 15 (ಮಹಿಳೆ 7)
ಹಿಂದುಳಿದ ವರ್ಗ(B) – 4 (ಮಹಿಳೆ 2)
ಸಾಮಾನ್ಯ – 32 (ಮಹಿಳೆ 16)
ಮಹಿಳೆಯರಿಗೆ ಒಟ್ಟು 30 ವಾರ್ಡ್ಗಳು ಮೀಸಲು
ಬೆಂಗಳೂರು ಪೂರ್ವ ನಗರ ಪಾಲಿಕೆ:
ಒಟ್ಟು ವಾರ್ಡ್ ಗಳ ಸಂಖ್ಯೆ – 50
SC – 7 (ಮಹಿಳೆ 3)
ST – 1
ಹಿಂದುಳಿದ ವರ್ಗ (A) – 14 (ಮಹಿಳೆ 7)
ಹಿಂದುಳಿದ ವರ್ಗ (B) – 3 (ಮಹಿಳೆ 1)
ಸಾಮಾನ್ಯ – 25 (ಮಹಿಳೆ 12)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು – 23
ಬೆಂಗಳೂರು ಪಶ್ಚಿಮ ನಗರ ಪಾಲಿಕೆ:
ಒಟ್ಟು ವಾರ್ಡ್ ಗಳ ಸಂಖ್ಯೆ – 112
SC – 9 (ಮಹಿಳೆ 4)
ST – 2 (ಮಹಿಳೆ 1)
ಹಿಂದುಳಿದ ವರ್ಗ (A) – 30 (ಮಹಿಳೆ 15)
ಹಿಂದುಳಿದ ವರ್ಗ (B) – 7 (ಮಹಿಳೆ 3)
ಸಾಮಾನ್ಯ – 64 (ಮಹಿಳೆ 32)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು – 55
ಬೆಂಗಳೂರು ಉತ್ತರ ನಗರ ಪಾಲಿಕೆ:
ಒಟ್ಟು ವಾರ್ಡ್ ಗಳ ಸಂಖ್ಯೆ – 72
SC – 9 (ಮಹಿಳೆ 4)
ST – 2 (ಮಹಿಳೆ 1)
ಹಿಂದುಳಿದ ವರ್ಗ (A) – 19(ಮಹಿಳೆ 9)
ಹಿಂದುಳಿದ ವರ್ಗ (B) – 5(ಮಹಿಳೆ 2)
ಸಾಮಾನ್ಯ – 37 (ಮಹಿಳೆ 18)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು – 34
ಬೆಂಗಳೂರು ದಕ್ಷಿಣ ನಗರ ಪಾಲಿಕೆ:
ಒಟ್ಟು ವಾರ್ಡ್ ಗಳ ಸಂಖ್ಯೆ – 72
SC – 7 (ಮಹಿಳೆ 3)
ST – 1
ಹಿಂದುಳಿದ ವರ್ಗ (A) – 19 ( =ಮಹಿಳೆ 9)
ಹಿಂದುಳಿದ ವರ್ಗ (B) – 5 (ಮಹಿಳೆ 2)
ಸಾಮಾನ್ಯ – 40 (ಮಹಿಳೆ 20)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು- 34




