
ಪ್ರಗತಿವಾಹಿನಿ ಸುದ್ದಿ: ಇಸೇಲ್-ಅಮೆರಿಕಾ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅಮೆರಿಕಾ ಇರಾನ್ ನ ತೈಲ ಘಟಕಗಳನ್ನು ಗುರುಯಾಗಿಸಿಕೊಂಡು ನಿಂರತರವಾಗಿ ದಾಳಿ ನಡೆಸಿದ ಪರಿಣಾಮ ಇರಾನ್ ನಲ್ಲಿರುವ ತೈಲ ಘಾಕಗಳು ಧಗಧಗನೆ ಹೊತ್ತಿ ಉರಿದಿವೆ. ದೇಶಾದ್ಯಂತ ತೈಲದ ಅಭಾವ ಎದುರಾಗಿದೆ. ಅಮೆರಿಕಾ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಸೌದಿ ಅರೇಬಿಯಾದ ವಿಶವ್ದ ನಂಬರ್ ಒನ್ ತೈಲ ಘಟಕದ ಮೇಲೆ ದಾಳಿ ನಡೆಸಿ ತೈಲಘಟಕ ಧ್ವಂಸಗೊಳಿಸಿದೆ. ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲದ ಅಭಾವ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಅಮೆರಿಕಾ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತಿದೆ. ಪ್ರತಿ ಬ್ಯಾರಲ್ ಬೆಲೆ 100 ಡಾಲರ್ ಗಡಿ ದಾಟಿದೆ.
ಬ್ರೆಂಟ್ ಕಚ್ಚಾ ತೈಲ ಶೇ.20ಕ್ಕಿಂತ ಹೆಚ್ಚಾಗಿ ಒಂದು ಹಂತದಲ್ಲಿ ಬ್ಯಾರಲ್ ಗೆ 114 ಡಾಲರ್ ತಲುಪಿದೆ. ಜಾಗತಿಕ ಇಂಧನ ಪೂರೈಕೆಯಲ್ಲಿ ದೀರ್ಘ ಕಾಲದ ಅಡಚಣಿ ಉಂಟಾಗುವ ಭೀತಿ ಎದುರಾಗಿದೆ.
ಫೆಬ್ರವರಿ 28ರಂದು ಅಮೆರಿಕ ಹಾಗೂ ಇಸ್ರೇಲ್, ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ಬಳಿಕ ಕಚ್ಚಾ ತೈಲ ಬೆಲೆಗಳು ಸುಮಾರು ಶೇ. ೫೦ರಷ್ಟು ಏರಿಕೆಯಾಗಿವೆ. ಇದಕ್ಕೆ ಪ್ರತಿಕಾರವಾಗಿ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಾಣೆಯನ್ನು ಸ್ಥಗಿತಗೊಳಿಸಿದೆ. ಇದು ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗವನ್ನು ನಷ್ಟಕ್ಕೀಡುಮಾಡಿದೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ ಮೂರು ಅತಿದೊಡ್ಡ ಉತ್ಪಾದಕ ರಾಷ್ಟ್ರಗಳಾದ ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್ ಜಲಮಾರ್ಗ ಮುಚ್ಚಿರುವುದರಿಂದ ತೈಲ ಸಾಗಾಟ ಸ್ಥಗಿತಗೊಂಡಿದೆ. ತೈಲ ಉತ್ಪಾದನೆ ಕೂಡ ಕಡಿತವಾಗಿದೆ. ಮುಂದಿನ ದಿನಗಳಲ್ಲಿ ಜಗತ್ತಿಗೇ ತೈಲದ ಅಭಾವ ಎದುರಾಗುವ ಆತಂಕ ಹೆಚ್ಚುತ್ತಿದೆ.
ಇಂಧನ ಬೆಲೆ ಭಾರಿ ಏರಿಕೆ ತಾತ್ಕಾಲಿಕ ಎಂದು ಅಮೆರಿಕ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ.


