Kannada NewsLatestWorld

*ಯುದ್ಧದ ನಡುವೆ ಭಾರತಕ್ಕೆ ಅತಿದೊಡ್ದ ರಾಜತಾಂತ್ರಿಕ ಗೆಲುವು*

ಪ್ರಗತಿವಾಹಿನಿ ಸುದ್ದಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಮುಂದುವರೆದಿರುವಾಗಲೇ ಭಾರತಕ್ಕೆ ಅತಿದೊಡ್ದ ರಾಜತಾಂತ್ರಿಕ ಗೆಲುವಾಗಿದೆ. ಹೊರ್ಮುಜ್ ಜಲಸಂಧಿ ಮೂಲಕವಾಗಿ ಭಾರತದ ತೈಲ ಹಡಗುಗಳು ಸಾಗಲು ಇರಾನ್ ಗ್ರೀನ್ ಸಿಗ್ನಲ್ ನೀಡಿದೆ.

ಇಸ್ರೇಲ್-ಅಮೆರಿಕಾ ಹಾಗೂ ಇರಾನ್ ನಡುವಿನ ಯುದ್ಧ ಮುಂದುವರೆದಿದ್ದು, ಅರಬ್ ರಾಷ್ಟ್ರಗಳಲ್ಲಿ ಉದ್ವಿಗ್ನಸ್ಥಿತಿ ನಿರ್ಮಾಣವಾಗಿದೆ. ಹೊರ್ಮೊಜ್ ಜಲಸಂಧಿ ಮಾರ್ಗದಲ್ಲಿ ಇರಾನ್ ತೈಲ ಟ್ಯಾಂಕರ್ ಗಳ ಸಾಗಾಟಕ್ಕೆ ತಡೆ ನೀಡಿತ್ತು. ಇದರಿಂದಾಗಿ ಹಲವು ದೇಶಗಳಿಗೆ ಸಾಅಬೇಕಿದ್ದ ತೈಲ ಹಡಗುಗಳು ನಿಂತಲ್ಲೇ ನಿಂತಿದ್ದು, ಅಂತರಾಶ್ಜ್ಟ್ರೀಯ ಮಟ್ಟದಲ್ಲಿ ಇಂಧನ ಹಾಗೂ ತೈಲ ಕೊರತೆ ಆರಂಭವಾಗಿದೆ.

Home add -Advt

ಈ ನಡುವೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್, ಇರಾನ್ ವಿದೇಶಾಂಗ ಇಲಾಖೆಯೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಹೊರ್ಮುಜ್ ಜಲಸಂಧಿ ಮಾರ್ಗದಲ್ಲಿ ಭಾರತದ ತೈಲ ಹಡಗುಗಳ ಸಾಗಾಟಕ್ಕೆ ಇರಾನ್ ಅವಕಾಶ ನೀಡಿದೆ. ಇದು ಸಧ್ಯದ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಕ್ಕ ಅತಿದೊಡ್ಡ ರಾಜತಾಂತ್ರಿಕ ಜಯವಾಗಿದೆ.

ಭಾರತದ ಭಾವುಟವಿರುವ ತೈಲ ಟ್ಯಾಂಕರ್ ಗಳನ್ನು ಹೊರ್ಮುಜ್ ಜಲಸಂಧಿಯಲ್ಲಿ ಸಾಗಲು ಅವಕಾಶ ನೀಡುವಂತೆ ಇರಾನ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಎರಡು ತೈಲ ಹಡಗುಗಳಾದ ಪುಷ್ಪಕ್ ಹಾಗೂ ಪರಿಮಳ ಹಡಗುಗಳು ಸಾಗಿ ಬಂದಿವೆ.


Related Articles

Back to top button