
ಪ್ರಗತಿವಾಹಿನಿ ಸುದ್ದಿ: ಇರಾನ್ ಹಾಗೂ ಇಸ್ರೇಲ್-ಅಮೆರಿಕದ ನಡುವಿನ ಯುದ್ಧ ಉದ್ವಿಗ್ನತೆಯ ಮಧ್ಯೆ ಭಾರತದ ಧ್ವಜವನ್ನು ಹೊಂದಿರುವ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ತಯಾರಿ ನಡೆಸುತ್ತಿವೆ ಎಂದು ವರದಿಯಾಗಿದೆ.
ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಮತ್ತು ಓಮನ್ ನಡುವಿನ ಕಿರಿದಾದ ಸಮುದ್ರ ಮಾರ್ಗದಲ್ಲಿ ನೂರಾರು ಹಡಗುಗಳು ಸಿಲುಕಿಕೊಂಡಿದ್ದವು. ಆದಾಗ್ಯೂ ಭಾರತದ ರಾಜತಾಂತ್ರಿಕ ಸಂಪರ್ಕದ ನಂತರ, ಎರಡು ಭಾರತೀಯ ಹಡಗುಗಳಾದ ಶಿವಾಲಿಕ್ ಮತ್ತು ನಂದಾ ದೇವಿ ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿ ಗುಜರಾತ್ ತಲುಪಿವೆ.
ಗಲ್ಫ್ ಸಮುದ್ರದಲ್ಲಿ ಲಂಗರು ಹಾಕಲಾಗಿರುವ ಇನ್ನೂ ಎರಡು ಭಾರತೀಯ ಟ್ಯಾಂಕರ್ಗಳು ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ದಾಟುವ ಸಾಧ್ಯತೆಯಿದೆ. ಗಲ್ಸ್ನೊಳಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಕೇಂದ್ರವಾದ ಶಾರ್ಜಾ ಬಳಿ ಲಂಗರು ಹಾಕಲಾಗಿರುವ ಭಾರತೀಯ ಧ್ವಜ ಹೊತ್ತ ಎಲ್ಪಿಜಿ ಟ್ಯಾಂಕರ್ಗಳಾದ ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿವೆ.
ಎರಡು ಎಲ್ಪಿಜಿ ಟ್ಯಾಂಕರ್ಗಳು ಶನಿವಾರ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಜಗ್ ವಸಂತ್ ಅನ್ನು ಬಿಪಿಸಿಎಲ್ ಮತ್ತು ಪೈನ್ ಗ್ಯಾಸ್ ಅನ್ನು ಐಒಸಿ ಚಾರ್ಟಡರ್ ಮಾಡಿವೆ ಎಂದು ತಿಳಿದುಬಂದಿದೆ.



