CrimeKannada NewsKarnataka NewsLatest

*ಪ್ರೀತಿಸಿ ಮದುವೆಯಾದ ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಮಲಗಿದ್ದ ಗಂಡನ ಮರ್ಮಾಂಗಕ್ಕೆ ಒದ್ದು ಹೆಂಡತಿ ಕೊಲೆಗೆ ಯತ್ನಿಸಿದ್ದು, ಅತ್ತ ಗಂಡ ಆಸ್ಪತ್ರೆ ಸೇರುತ್ತಿದ್ದಂತೆ ಇತ್ತ ಹೆಂಡತಿ ಆಸ್ಪತ್ರೆ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಪತಿ ಮುನೀಂದ್ರ ಹಾಗೂ ವರ್ಷಾ ನಡುವೆ ಗಲಾಟೆಯಾಗಿದ್ದು, ಬಳಿಕ ಮುನೀಂದ್ರ ಮಲಗಿದ್ದ ವೇಳೆ ಪತ್ನಿ ವರ್ಷಾ ಆತನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ.  ತನ್ನ ಗಂಡನಿಗೆ ಡೈವೋರ್ಸ್ ಕೊಡುವಂತೆ ಪೀಡಿಸಿದ್ದಾಳೆ. ಆದ್ರೆ,  ಡೈವೋರ್ಸ್ ಕೊಡಲು ಒಪ್ಪದ ಗಂಡ ಮನೆಯಲ್ಲಿ ಮಲಗಿದ್ದಾಗ, ಆತನ ಮರ್ಮಾಂಗಕ್ಕೆ ಒದ್ದು ಕೊಲೆ ಯತ್ನ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.

ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ನಿವಾಸಿಗಳಾದ ಮುನಿಂದ್ರ ಹಾಗೂ ವರ್ಷಾ  ಐದು ವರ್ಷ ಪರಸ್ಪರ ಪ್ರಿತಿಸಿದ್ದು,  ಕಳೆದ 2 ವರ್ಷ ಹಿಂದಷ್ಟೇ ಪೊಲೀಸ್ ಠಾಣೆಯಲ್ಲಿ ವಿವಾಹವಾಗಿದ್ದರು. ಆದ್ರೆ, ಮದುವೆ ಬಳಿಕ ವರ್ಷಾ ಗಂಡನಿಗೆ ಡೈವೋರ್ಸ್ ಪೀಡಿಸಲು ಶುರು ಮಾಡಿದ್ದಾಳೆ. ಇದೇ ವಿಚಾರಕ್ಕೆ ಪದೇ ಪದೇ  ಜಗಳ ಮಾಡುತ್ತಿದ್ದಳಂತೆ. 

ಗಲಾಟೆ ಬಳಿಕ ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ. ಬಳಿಕ ಆತನೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚಿಂತಾಮಣಿ ತಾಲೂಕು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ

Home add -Advt

ಇನ್ನು ಬೆಳಗ್ಗೆ  ಆಸ್ಪತ್ರೆಗೆ ಬಂದ ಮಹಿಳೆಗೆ ಗಂಡನನ್ನ ನೋಡಲು ಕುಟುಂಬಸ್ಥರು ಅವಕಾಶ ನೀಡಿಲ್ಲ. ಇದಾದ ಬಳಿಕ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಮಹಿಳೆ ಕ್ರೀಮಿನಾಶಕ ಸೇವಿಸಿ ಹೈಡ್ರಾಮಾವೇ ಮಾಡಿದ್ದಾಳೆ. 

ಇನ್ನು ವಿಷ ಸೇವಿ ಆತ್ಮಹತ್ಯೆಗೆ ಯತ್ನಿಸಿದ ವರ್ಷಾ, ಅಸ್ವಸ್ಥಳಾಗಿದ್ದು, ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Back to top button