Belagavi NewsBelgaum NewsCrimeKannada NewsKarnataka NewsLatest

*ನೀರು ಹಾಯಿಸುವ ವಿಚಾರಕ್ಕೆ ಗಲಾಟೆ; ತಮ್ಮನ ಚಟ್ಟ ಕಟ್ಟಿದ ಅಣ್ಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಈ ಹಂದೆ ಅಣ್ಣ ತಮ್ಮಂದಿರ ನಡುವೆ ದ್ವೇಷ ಇತ್ತು. ಆದರೆ ಹೊಲದಲ್ಲಿ ನೀರು ಹರಿಸುವಾಗ ಮಾತಿಗೆ ಮಾತು ಬೆಳೆದು ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಲ್ಲಪ್ಪ ದೇಮಪ್ಪ ಸಣ್ಣಮ್ಮನವರ (45) ಕೊಲೆಯಾಗಿರುವ ವ್ಯಕ್ತಿ. ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ (55) ಬಂಧಿತ ಆರೋಪಿಗಳು.

ಕೊಲೆ ಮಾಡಿದ ಆರೋಪಿ ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ ಹೊವಿನ ಹೊಲದಲ್ಲಿ ಗಿಡಗಳು ಮುರಿದು ಬಿದಿದ್ದವು ಅದಕ್ಕೆ ನೀನೆ ನನ್ನ ಜಮೀನದಲ ಹೂವಿನ ಗಿಡಗಳನ್ನು ಮುರಿದಿದ್ದಿಯಾ ಎಂದು ತಮ್ಮನ ಜೊತೆ ಜಗಳ ಮಾಡಿ ಕೈಯಲ್ಲಿದ್ದ ಸಲಿಕೆಯಿಂದ ಹೋಡೆದು ಕೊಲೆ ಮಾಡಿದ್ದಾನೆ.

ಈ ಕುರಿತು ಲಕ್ಷ್ಮೀ ಯಲ್ಲಪ್ಪ ಸಣ್ಣಮ್ಮನವರ ಇವರು ಮುರಗೋಡ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಆಯ್ ಎಂ ಮಠಪತಿ ಬೇಟೆ ನೀಡಿ ತನಿಖೆ ಕೈಗೊಂಡಿದ್ದಾರೆ.

Home add -Advt

Related Articles

Back to top button