Kannada NewsLatestWorld

*ಪ್ರವಾಸಿಗರ ಬೋಟ್ ದುರಂತ: ವಿಯೆಟ್ನಾಮ್ ನಲ್ಲಿ 15 ಭಾರತೀಯರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ದ್ವೀಪಗಳನ್ನು ನೋಡಲೆಂದು ಭಾರತೀಯ ಪ್ರವಾಸಿಗರು ತೆರಳುತ್ತಿದ್ದ ಬೋಟ್ ಮಗುಚಿ ಬಿದ್ದ ಪರಿಣಾಮ 15 ಮಂದಿ ಭಾರತೀಯರು ಸಾವನ್ನಪ್ಪಿರುವ ಘಟನೆ ವಿಯೆಟ್ನಾಮ್ ನಲ್ಲಿ ನಡೆದಿದೆ.

ವಿಯೆಟ್ನಾಮ್ ನ ಫು ಕ್ವಾಕ್‌ ದ್ವೀಪದಲ್ಲಿ ಈ ದುರಂತ ಸಂಭವಿಸಿದೆ. 32 ಭಾರತೀಯರು ಹಾಗೂ ನಾಲ್ವರು ವಿಯೆಟ್ನಾಮ್ ಸಿಬ್ಬಂದಿ ಸೇರಿ 36 ಜನರು ಪ್ರಯಾಣಿಸುತ್ತಿದ್ದ ಬೋಟ್ ಏಕಾಏಕಿ ಮಗುಚಿ ಬಿದ್ದಿದ್ದು, ಘಟನೆಯಲ್ಲಿ 15 ಭಾರತೀಯರು ಮೃತಪಟ್ಟಿದ್ದಾರೆ. 21 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಓಷನ್ ಪರ್ಲ್ ಐಲ್ಯಾಂಡ್ ಕಂಪನಿ ನಿರ್ವಹಿಸುತ್ತಿದ್ದ ಬೋಟ್ ಇದಾಗಿದ್ದು, ಬೋಟ್ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತಪಟ್ಟವರೆಲ್ಲರೂ ಆಂಧ್ರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button