Kannada NewsNationalPolitics

*ಪ್ರಧಾನಿ ಮೋದಿಯವರಿಂದ ಅಸಾಧ್ಯವಾದದ್ದು ಸಾಧ್ಯ ಆಗುತ್ತದೆ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ದೇಶದ ಬಲಿಷ್ಠ ಆರ್ಥಿಕತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಠಿಣ ಪರಿಶ್ರಮ ಇದೆ. ಮೋದಿಯವರು ಹೇಳಿದ್ದನ್ನು ಮಾಡುತ್ತಾರೆ. ಮೋದಿ ಇದ್ದರೆ ಅಸಾಧ್ಯವಾದದ್ದು ಸಾಧ್ಯ ಆಗುತ್ತದೆ. ಹೀಗಾಗಿ ದೇಶದ ಸಾಮಾನ್ಯ ಜನರು ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ. ಪ್ರತಿಪಕ್ಷ ಎಲ್ಲದರಲ್ಲೂ ನಕಾರಾತ್ಮಕ ರಾಜಕಾರಣ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಸಂಸತ್ತಿನಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2026-27 ನೇ  ಸಾಲಿನ ಬಜೆಟ್ ಮಂಡನೆಗೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರ ಹಿಂದೆ ಬಹಳ ಶ್ರಮ ಇದೆ. ಎಕನಾಮಿಕ್‌ನಲ್ಲಿ ಮ್ಯಾಜಿಕ್ ಇಲ್ಲ. ಮೋದಿ ಪ್ರಧಾನಿಯಾದಾಗ ದೇಶದ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಇದನ್ನು ಎಲ್ಲಿಂದ, ಹೇಗೆ ಸರಿ ಮಾಡುವುದು ಎನ್ನುವ ಚಿಂತನೆ ಇತ್ತು. ಹಣದುಬ್ಬರ ಎರಡಂಕಿ ಇತ್ತು. ಜಿಡಿಪಿ ಪಾತಾಳಕ್ಕಿಳಿದಿತ್ತು. ಪ್ರಧಾನಿ ಆರ್ಥಿಕತೆಯನ್ನು ಮರು ಸೃಷ್ಟಿ ಮಾಡಿದರು. ಇದರ ಹಿಂದೆ 11 ವರ್ಷಗಳ ಕಠಿಣ ಶ್ರಮ ಇದೆ. ಜನರು ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕತೆ ಬರೇ ಹಣದಿಂದ ಆಗುವುದಿಲ್ಲ. ಕೇಳ ಹಂತದ ಜನರು ಆರ್ಥಿಕತೆಯ ಸೃಷ್ಟಿಕರ್ತರು.. ಯಾರು ನಿತ್ಯ ದುಡಿಯುತ್ತಾರೆ. ಅವರು ನಿಜವಾದ ಆರ್ಥಿಕತೆಯನ್ನು ಬೆಳೆಸುವವರು. ನಾವು ಹಣ ಮಂಜೂರು ಮಾಡಬಹುದು, ಆದರೆ, ತಳ ಹಂತದಲ್ಲಿ ಅದನ್ನು ಜಾರಿ ಮಾಡುವವರು ನಿಜವಾದ ಆರ್ಥಿಕ ಸುಧಾರಕರು ಎಂದು ಹೇಳಿದರು.

ದೂರದೃಷ್ಟಿಯುಳ್ಳ ಪಧಾನಮಂತ್ರಿ ಬಂದರೆ ಸಂಕಷ್ಟವನ್ನು ಹೇಗೆ ಅವಕಾಶವನ್ನಾಗಿ ಮಾಡಿ ತೋರಿಸುತ್ತಾರೆ ಎನ್ನುವುದನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ತೋರಿಸಿದ್ದಾರೆ. ಪ್ರತಿಪಕ್ಷದವರು ಏನು ಹೇಳುತ್ತಾರೆ ಹೇಳಲಿ, ಅವರು ಖಜಾನೆ ಖಾಲಿ ಮಾಡಿ ಹೋಗಿದ್ದರು. ಮೋದಿ ಯವರು ಅದನ್ನು ಸರಿ ದಾರಿಗೆ ತಂದಿದ್ದಾರೆ. ನಮ್ಮ ಖರ್ಚು ಶೇ 7.7 % ಆಗಿತ್ತು. ನಮ್ಮ ಜಿಡಿಪಿ ಅಭಿವೃದ್ಧಿ ಶೇ 10 ನಿರೀಕ್ಷಿಸಲಾಗಿದೆ. ಎರಡಂಕಿಯ ಜಿಡಿಪಿ ನಿರೀಕ್ಷೆ ಇದೆ. ನಮ್ಮ ವಿತ್ರೀಯ ಕೊರತೆ  ಶೇ 4.4 ರಿಂದ 4.3% ಕ್ಕೆ ಇಳಿದಿದೆ. ಕಳೆದ ಒಂದು ತಿಂಗಳಲ್ಲಿ ಇಡೀ ವ್ಯವಸ್ಥೆ ಬದಲಾಗುತ್ತಿದೆ. ನಮ್ಮ ಪ್ರಧಾನಿ ಇಂದು ದೇಶ ಮತ್ತು ಜಗತ್ತಿನಲ್ಲಿ ಏನಾಗುತ್ತಿದೆ ಎಂದು ಸದನದಲ್ಲಿ ಹೇಳಿದ್ದಾರೆ. ಇರಾಕ್ ಯುದ್ಧದ ಸಂದರ್ಭದಲ್ಲಿ ಯುದ್ಧ ಶುರುವಾದ ಮೂರೇ ದಿನದಲ್ಲಿ ಕಿಲೋಮೀಟರ್ ಗಟ್ಟಲೇ ಪೆಟ್ರೋಲ್ ಬಂಕ್ ಗಳಲ್ಲಿ ಕ್ಕೂ ಇತ್ತು. ನಮ್ಮ ಪ್ರಧಾನಿಯವರ ರಾಜತಾಂತ್ರಿಕ ನಡೆಯಿಂದ ಯುದ್ಧ ಶುರುವಾಗಿ 22 ದಿನ ಕಳೆದರೂ ಪೆಟ್ರೋಲ್ ಬಂಕ್ ಮುಂದೆ ಯಾವುದೇ ಕ್ಕೂ ಇಲ್ಲ. ನಾವು 11 ವರ್ಷದಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದ್ದೇವೆ. ಈ ದೇಶದ ಆರ್ಥಿಕತೆಯನ್ನು ಕಾಯ್ದುಕೊಂಡಿದ್ದೇವೆ. ಬೇರೆ ದೇಶಗಳನ್ನು ನೋಡಿ ಅಲ್ಲಿ ಜನರ ಜೀವನ ಸ್ಥಗಿತಗೊಂಡಿದೆ. ಅಲ್ಲಿ ಜನರು ರಜೆಯಲ್ಲಿದ್ದಾರೆ. ನಮ್ಮಲಿ ಯಾವುದೇ ಆರ್ಥಿಕತೆ ಸ್ಥಗಿತಗೊಂಡಿಲ್ಲ. ಎಲ್ ಪಿಜಿ ಸಮಸ್ಯೆಯಾಗಿದೆ. ಅದು ಸುಧಾರಣೆಯಾಗಲಿದೆ. ಇದು ನಮ್ಮ ಪ್ರಧಾನಿಯವರ ಶ್ರಮ ಎಂದು ಹೇಳಿದರು.

ಈಗ ಎದುರಾಗಿರುವ ಸಮಸ್ಯೆಯನ್ನು ಎದುರಿಸಲು ಎಷ್ಟು ಹಣ ಬೇಕಿದೆ ಎನ್ನುವುದು ಈಗಿರುವ ಪ್ರಶ್ನೆ 1 ಲಕ್ಷ ಕೋಟಿ ರೂ. ಹೆಚ್ಚಿನ ಹಣ ಬೇಕಿದೆ ಎಂದು ಹಣಕಾಸು ಸಮಿತಿ ಹೇಳಿದೆ. ಹಣಕಾಸು ಸಚಿವರು ಎಷ್ಟು ಹಣ ಇಡುತ್ತಾರೆ ಎಂದು ಹೇಳಬಹುದು. ಕೊವಿಡ್ ಸಂದರ್ಭದಲ್ಲಿ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎದುರಿಸಿದ್ದೇವೆ. ಆಗ ವಲಸೆ ಕಾರ್ಮಿಕರ ರಕ್ಷಣೆ, ಆಹಾರ ಭದ್ರತೆ, ಜನರ ಆರೋಗ್ಯ ಕಾಪಾಡಲಾಗಿದೆ. ಲಸಿಕೆ ಹಾಕಲಾಗಿದೆ. ರಾಜ್ಯಗಳಿಗೆ ಹಣಕಾಸಿನ ನೆರವು ನೀಡಿದ್ದೇವೆ. ಅದು ಕೇಂದ್ರ ಸರ್ಕಾರ ಶಕ್ತಿ. ಮೋದಿಯವರ ಸಾಮರ್ಥ್ಯ. ದೇಶದ ಎಲ್ಲ ಸಂಕಷ್ಟದ ಸಂದರ್ಭದಲ್ಲಿ ಮೋದಿ ಜನರನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

Home add -Advt

ಕೇಂದ್ರ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಮಾಡಿದೆ. ಟ್ಯಾಕ್ಸ್ ಹಾಲಿಡೆ, ದಂಡ ವಿಧಿಸುವಿಕೆ ಹೆಚ್ಚಾಗಿದೆ. ವಿಕಸಿತ ಭಾರತಕ್ಕಾಗಿ ಹೈಲೆವೆಲ್ ಕಮಿಟಿ ಮಾಡುವ ಅಗತ್ಯವಿದೆ. ನಾವು ವಿದೇಶ ವಿನಿಮಯದಲ್ಲಿ ಬಹಳ ಬಲಿಷ್ಠ ಇದ್ದೇವೆ. ಅದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಅದಕ್ಕಾಗಿ ಒಂದು ನೀತಿ ಅಗತ್ಯವಿದೆ. ಸಮಿತಿ  ಶಿಫಾರಸು ಮಾಡಲಿದೆ. ಆರ್ಥಿಕತೆಯಲ್ಲಿ ಮ್ಯಾಜಿಕ್ ಇಲ್ಲಾ. ಬರೆ ಫಲಿತಾಂಶ, ಫಲಿತಾಂಶ ಕಠಿಣ ಶ್ರಮದಿಂದ ಬರುತ್ತದೆ. ನಾವು ರಸ್ತೆ, ರೈಲ್ವೆ, ಏರ್‌ವೇ ಅಭಿವೃದ್ಧಿ ಮಾಡಿದ್ದೇವೆ. ಎಲ್ಲ ರೀತಿಯ ಮಾರ್ಗಗಳು ಆಧುನೀಕರಣ ಮಾಡಲಾಗಿದೆ. ನಾವು ರೈಲ್ವೆಯಲ್ಲಿ  ಶೇ 80 ರಷ್ಟು ವಿದ್ಯುದ್ದೀಕರಣ  ಮಾಡಿದ್ದೇವೆ. ಇನ್ನೆರಡು ವರ್ಷದಲ್ಲಿ ಶೇ 100 ರಷ್ಟು ವಿದ್ಯುದ್ದೀಕರಣ ಮಾಡಲಿದ್ದೇವೆ. ವಾಟರ್ ವೇ ನಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಗಂಗಾನದಿಯಿಂದ ದಿಂದ ಗುಜರಾತ್ ವರೆಗೆ ವಾಟರ್ ವೇ ಮಾಡಲಿದ್ದೇವೆ. ಇದು ಬಹಳ ಬದಲಾವಣೆ ತರಲಿದೆ. ಸಾಗರ ಮಾಲಾ ಯೋಜನೆ ಅಡಿಯಲ್ಲಿ ಬಂದರುಗಳ ಅಭಿವೃದ್ಧಿ ಮಾಡಲಿದ್ದೇವೆ. ಇದರಿಂದ ದೊಡ್ಡ ಹಡಗಳನ್ನು ಪಾರ್ಕ್ ಮಾಡಬಹದು. ಇದು ಕೇವಲ ಒಂದು ದಿನದ ಕೆಲಸವಲ್ಲ. ವಿದ್ಯುತ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇವೆ. ಶೇ. 50 ಕ್ಕಿಂತ ಹೆಚ್ಚು ನವೀಕರಣ ಇಂಧನದಿಂದ ಬರುತ್ತಿದೆ. ಅದು ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗುತ್ತಿದೆ. ಅದು ಈ ಸಂದರ್ಭದಲ್ಲಿ ಸಾಕಷ್ಟು ಉಪಯೋಗಕ್ಕೆ ಬಂದಿದೆ. ವಿದ್ಯುತ್ ಆರ್ಥಿಕ ಅಭಿವೃದ್ಧಿಗೆ ಬಹಳ ಪೂರಕವಾಗಿದೆ. ನಾವು ಏನು ಸಾಧಿಸಿದದ್ದೇವೆ ಅದಕ್ಕೆ ಸಮಾಧಾನವಿಲ್ಲ. ನಾವು ನ್ಯೂಕ್ಲಿಯೃ ವಿದ್ಯುತ್  ಉತ್ಪಾದನೆಗೆ ಸ್ಮಾಲ್  ನ್ಯೂಕ್ಲಿಯರ್ ಪ್ಲಾಂಟ್ ಹಾಕಿದರೆ 2047ಕ್ಕೆ ನಾವು ವಿದ್ಯುತ್ ಕ್ಷೇತ್ರದಲ್ಲಿ ಶೇ 100%  ರಷ್ಟು ಆತ್ಮ ನಿರ್ಭರ ಆಗುತ್ತೇವೆ ಎಂದು ಹೇಳಿದರು.

ಕೃಷಿಯಲ್ಲಿ ಹೂಡಿಕೆಯ ಬಗ್ಗೆ ಹಲವರು ಮಾತನಾಡಿದ್ದಾರೆ. ಮಾಜಿ ಪ್ರಧಾನಿ ನೆಹರು ಹೇಳುತ್ತಿದ್ದರು. ನಾನು ಅದನ್ನು ಒಪ್ಪುತ್ತೇನೆ. ಕೃಷಿಯಲ್ಲಿ 1 ರಷ್ಟು ಅಭಿವೃದ್ಧಿಯಾದರೆ ಉತ್ಪಾದನೆ ವಲಯದಲ್ಲಿ 4 ರಷ್ಟು, ಸೇವಾ ವಲಯದಲ್ಲಿ 10 ರಷ್ಟು ಅಭಿವೃದ್ಧಿ ಆಗುತ್ತದೆ. ಅದಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಬೇಕು. ನಾವು ಸ್ವಾತಂತ್ರ್ಯ ಹೊಂದಿದಾಗ 33 ಕೋಟಿ ಜನ ಇದ್ದೆವು. ಆಗ ಆಹಾರ ಭದ್ರತೆ ಇರಲಿಲ್ಲ. ಈಗ 140 ಕೋಟಿ ಜನರಿದ್ದೇವೆ ಈಗ ಆಹಾರ ಉತ್ಪಾದನೆ ಸಂಪೂರ್ಣ ಇದೆ. ಅದಕ್ಕೆ ರೈತರ ಕಠಿಣ ಶ್ರಮ ಕಾರಣ. ಕೃಷಿ ಬೆಳೆದಿದೆ ಆದರೆ ಕೃಷಿಕ ಅಲ್ಲಿಯೇ ಇದ್ದಾನೆ. ಆತ ತನ್ನ ಮಕ್ಕಳ ಶೀಕ್ಷಣ, ಮದುವೆಗೆ ಸಾಲಮಾಡದ ಪರಿಸ್ಥಿತಿ ನಿರ್ಮಾಣವಾಗಬೇಕು. ಆಗ ಅವನು ಸಶಕ್ತನಾಗಬಲ್ಲ. ಕೇಂದ್ರ ಸರ್ಕಾರ 1.75 ಲಕ್ಷ ಕೋಟಿ ರೂ. ರಸಗೊಬ್ಬರಕ್ಕೆ ನೀಡುತ್ತಿದ್ದೇವೆ. ರಸಗೊಬ್ಬರ ಪ್ರತಿ ಕ್ವಿಂಟಲ್‌ಗೆ 3000 ರೂ. ಇದ್ದರೆ ಅದನ್ನು 300 ರೂ ರೈತರಿಗೆ ಸಿಗುತ್ತದೆ. ಪ್ರಧಾನಿ ಶೇ 75 ಸಬ್ಸಿಡಿ ಕೊಡುತ್ತಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಸಣ್ಣ ರೈತರಿಗೆ ಬಹಳ ಅನುಕೂಲವಾಗುತ್ತದೆ. ಅದಕ್ಕೆ ಪ್ರತಿ ವರ್ಷ 65 ಸಾವಿರ ಕೋಟಿ ನೀಡಲಾಗುತ್ತದೆ ಎಂದು ಹೇಳಿದರು. 

ನಾವು ದೇಶದ ಭವಿಷ್ಯಕ್ಕಾಗಿ ಬಲಿಷ್ಟ ಆರ್ಥಿಕತೆ ಹೊಂದಬೇಕು. ಅದಕ್ಕೆ ದೂರದೃಷ್ಟಿ ಉಳ್ಳ ನಾಯಕ ಬೇಕು. ಜನರು ಬಲಿಷ್ಠ ನಾಯಕನ ಮೇಲೆ ನಂಬಿಕೆ ಇಡುತ್ತಾರೆ. ಜನರು ಮೋದಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೋದಿ ಇದ್ದರೆ ಅಸಾಧ್ಯವಾದದ್ದು ಸಾಧ್ಯ ಆಗುತ್ತದೆ. ಅವರು ಏನು ಹೇಳುತ್ತಾರೆ ಅದನ್ನು ಮಾಡುತ್ತಾರೆ. ಸಾಮಾನ್ಯ ಜನರಿಗೆ ಮೋದಿ ಮೇಲೆ ನಂಬಿಕೆ ಇದೆ. ಪ್ರತಿಪಕ್ಷದವರು ನಂಬಲಿ ಬಿಡಲಿ, ಏನೂ ವ್ಯತ್ಯಾಸ ಆಗುವುದಿಲ್ಲ. ನಾವು ಇರುತ್ತೇವೊ ಬಿಡುತ್ತೇವೊ ಗೊತ್ತಿಲ್ಲ. ಆದರೆ ದೇಶ ಇರುತ್ತದೆ ನಮ್ಮ ಮಕ್ಕಳು ಇರುತ್ತಾರೆ. ಅವರ ಬಗ್ಗೆ ಯೋಚನೆ ಮಾಡಿ, ಕೇವಲ ರಾಜಕಾರಣ ಮಾಡುವುದನ್ನು ಬಿಡಿ, ರಾಜಕಾರಣ ಮಾಡಲು ಇಡೀ ಜೀವನ ಕಳೆದಿದ್ದೀರಾ. ಗಲ್ಪ್ ಯುದ್ದ, ಕೊವಿಡ್ ಸಂದರ್ಭದಲ್ಲಿಯೂ ರಾಜಕೀಯ ಮಾಡಿದ್ದೀರಿ. ನಕಾರಾತ್ಮಕ ರಾಜಕಾರಣ ಮಾಡುವುದನ್ನು ಬಿಡಿ. ನಿಮ್ಮ ರಾಜಕೀಯ ಜೀವನ ಸುಧಾರಿಸುತ್ತದೆ. ನೆಗೆಟಿವ್ ಜೊತೆ  ಮದುವೆಯಾದರೆ ಏನೂ ಆಗುವುದಿಲ್ಲ. ಹಣಕಾಸು ಸಚಿವರು ತಂದಿರುವ ಸುಧಾರಣೆಗಳಿಗೆ ನನ್ನ ಬೆಂಬಲ ಇದೆ. ಪ್ರಧಾನಿ ಮೋದಿಯವರ ಎಲ್ಲ ನೀತಿಗಳಿಂದ ಭಾರತ ಪ್ರಕಾಶಿಸುತ್ತದೆ. ಎಂದು ಹೇಳಿದರು.

Related Articles

Back to top button