Kannada NewsLatestWorld

*110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ*

ಪ್ರಗತಿವಾಹಿನಿ ಸುದ್ದಿ: 110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನವಾಗಿದ್ದು ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕೊಲಂಬಿಯಾದ ವಾಯುಪಡೆಯ ವಿಮಾನವಾಗಿದ್ದು, ವಿಮಾನ ದುರಂತದ ಬಗ್ಗೆ ಕೊಲಂಬಿಯಾದ ಪುಟುಮಾಯೊ ಇಲಾಖೆಯ ಗವರ್ನರ್ ಮಾಹಿತಿ ನೀಡಿದ್ದಾರೆ.

Home add -Advt

ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ವಿಮಾನ ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಟೇಕ್ ಆಫ್ ಆದ ಸ್ವಲ್ಪವೇ ಸಮಯದ ಬಳಿಕ ಪತನವಾಗಿದೆ 

ವಿಮಾನವು ಹಾರಾಟ ಆರಂಭಿಸಿದ ಸ್ಥಳದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿ ನೆಲಕ್ಕೆ ಅಪ್ಪಳಿಸಿದೆ ಮತ್ತು ವಿಮಾನದಲ್ಲಿ ಸ್ಪೋಟಕಗಳನ್ನು ಸಾಗಿಸಲಾಗುತ್ತಿದ್ದರಿಂದ ವಿಮಾನ ಪತನವಾಗುತ್ತಲೇ ಭೀಕರ ಸ್ಫೋಟಗಳು ಸಂಭವಿಸಿವೆ. 

ಅಪಘಾತಕ್ಕೀಡಾದ ವಿಮಾನದ ಅವಶೇಷಗಳಿಂದ ದಟ್ಟವಾದ ಹೊಗೆ ಏಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ವಿಮಾನದ ಅವಶೇಷಗಳಿಂದ ಸುಮಾರು 57 ಸೈನಿಕರನ್ನು ಜೀವಂತವಾಗಿ ಸ್ಥಳಾಂತರಿಸಲಾಗಿದೆ. ವಿಮಾನದ ಮೇಲೆ ಯಾವುದೇ ಅಕ್ರಮ ದಾಳಿ ನಡೆದಿರುವ ಸೂಚನೆ ಇಲ್ಲ ಹಾಗೂ ವಿಮಾನ ಹಾರಾಟಕ್ಕೂ ಮುನ್ನ ಯಾವುದೆ ತಾಂತ್ರಿಕ ಸಮಸ್ಯೆ ಇರಲಿಲ್ಲ ಎಂದು ಹೇಳಲಾಗುತ್ತಿದೆ.

Related Articles

Back to top button