Belagavi NewsBelgaum NewsCrimeKannada NewsKarnataka NewsNational
*ಗಾಯಾಳುವಿಗೆ ನೆರವಾದ ಗೃಹರಕ್ಷಕದಳದ ಕಚೇರಿಯ ಭೋಧಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರ್ ಮತ್ತು ಬೈಕ್ ನಡುವೆ ನಡದ ಅಪಘಾತದಲ್ಲಿ ಗಂಭೀರ ಗಾಯಗಳಾಗಿ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಬೆಳಗಾವಿ ಹೋಮ್ ಗಾರ್ಡ್ ಕಚೇರಿಯ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ ನಗರದ ಆರ್ ಟಿ ಒ ಸರ್ಕಲ್ ಹತ್ತಿರ ಕಾರ್ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಗಾಯಾಳುವನ್ನು ಬೆಳಗಾವಿ ಜಿಲ್ಲಾ ಗೃಹರಕ್ಷಕದಳದ ಕಛೇರಿಯ ಭೋಧಕರಾದ ರವೀಂದ್ರ ಮಾಳಗಿ ಇವರು ತಮ್ಮ ಇಲಾಖೆಯ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೆರೆದಿದ್ದಾರೆ. ರವೀಂದ್ರ ಮಾಳಗಿ ಅವರ ಕಾರ್ಯಕ್ಕೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಚನ್ನಪ್ಪ ಅಥಣಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

