Belagavi NewsBelgaum NewsKannada NewsKarnataka NewsLatest

*ಶ್ರೀ ಸಿದ್ದಾರೂಢ ತೊಟ್ಟಿಲೋತ್ಸವ ಹಾಗೂ ಜಾತ್ರಾ ಮಹೋತ್ಸವ: ವಿಜೃಂಭಣೆಯಿಂದ ನೆರವೇರಿದ ಮಹಾರಥೋತ್ಸವ*

ಪ್ರಗತಿವಾಹಿನಿ ಸುದ್ದಿ: ಬೈಲಹೊಂಗಲ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ ಚತುರ್ಥ ವರ್ಷದ ಶ್ರೀ ಸಿದ್ದಾರೂಢ ತೊಟ್ಟಿಲೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಗುರವಾರ ದಿ :- 26/03/2026 ರಂದು ಸಂಜೆ ಭಕ್ತಿ ಭಾವ ದಿಂದ ಮತ್ತು ವಿಜೃಂಭಣೆಯಿಂದ ನೆರವೇರಿತು.

ಅರಭಾವಿ ಮಠದ ಗುರು ಬಸವಲಿಂಗ ಮಹಾಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶ್ರೀ ಚಿದಾನಂದ ಮಹಾಸ್ವಾಮಿಗಳು ಗಾಳೇಶ್ವರ ಮಠ ಮಲ್ಲಾಪುರ ಇವರ ಅಮೃತ ಹಸ್ತದಿಂದ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.

ಕಳಸ ಹೊತ್ತು ಆಕರ್ಷಕವಾಗಿ ಅಲಂಕರಿಸಲಾದ ರಥವನ್ನು ಭಕ್ತರು ಬಾರಿ ಉತ್ಸಾಹದಿಂದ ಏಳೆದರು.

“ಓಂ ನಮಃ ಶಿವಾಯ” ಶ್ರೀ ಸಿದ್ಧಾರೂಢ ಮಹಾರಾಜಕಿ ಜೈ” ಎಂಬ ಘೋಷಣೆಗಳ ನಡುವೆ ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಹೂವು, ಹಣ್ಣು ಕಾರಿಕ, ಹಾಗೂ ಕಾಣಿಕೆಗಳನ್ನು ರಥಕ್ಕೆ ಅರ್ಪಿಸಿದರು.

Home add -Advt

ಇಡಿ ದಿನ ದೇವಸ್ಥಾನದಲ್ಲಿ ಶ್ರೀ ಸಿದ್ಧಾರೂಢರ ಮೂರ್ತಿಗೆ ವಿಶೇಷ ಪೂಜೆ, ಮಹಾ ಅಭಿಷೇಕ, ಆನೆ ಉತ್ಸವ , ಕುಂಭಮೇಳ,ಪಲ್ಲಕ್ಕಿ ಉತ್ಸವ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ರಥೋತ್ಸವ ಮುಂಭಾಗದಲ್ಲಿ ಕರಡಿ ಮಜಲು, ಬೀರೇಶ್ವರ ಡೊಳ್ಳಿನ ಮಜಲು, ಹಾಗೂ ಶ್ರೀ ಮಲ್ಲಿಕಾರ್ಜುನ ತಂಡದ ಭಜನೆಯೊಂದಿಗೆ ಮೆರವಣಿಗೆ ಸಾಗಿತು.

ಭಕ್ತರು “ಜೈ ಸಿದ್ಧಾರೂಢ ಮಹಾರಾಜಕಿ ಜೈ ” ಗುರುನಾಥರೂಢ ಮಹಾರಾಜಕಿ ಜೈ ” ಎಂದು ಘೋಷಿಸುತ್ತಾ ರಥವನ್ನು ಮುಂದೆ ಕರೆದೊಯ್ದರು.

ಅತಿಥಿಗಳಾಗಿ :- ಬೈಲಹೊಂಗಲ ಮತಕ್ಷೆತ್ರದ ಮಾನ್ಯ ಶಾಸಕರು ಮಹಾಂತೇಶ ಕೌಜಲಗಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ ಯವರು ಭಾಗವಹಿಸಿದ್ದರು.

ಊರಿನ ಪ್ರಮುಖ ಬಿದಿಗಳಲ್ಲಿ ಶ್ರೀ ಸಿದ್ದಾರೂಢ ಸ್ವಾಮೀ ಪಾಲಿಕೆ, ಉತ್ಸವ ಕಾರ್ಯಕ್ರಮ ಜರುಗಿತು,
ತದ ನಂತರ ಶ್ರೀ ಸಿದ್ದಾರೂಢ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು,
ಹಾಗೂ ಊರಿನ ಹೆಣ್ಣು ಮಕ್ಕಳಿಗೆ ಉಡಿ ತುಂಬವಕಾರ್ಯಕ್ರಮ ಜರುಗಿತು.

ಗಣ್ಯರಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮ ಜರುಗಿತು,
ಶ್ರೀ ಸಿದ್ದಾರೋಡ ಮಠದಲ್ಲಿ ಬಂದ ಭಕ್ತರಿಗೆ ಮಹಾ ಪ್ರಸಾದ ವೆವಸ್ಥೆ ಮಾಡಲಾಗಿತ್ತು.

ಈ ಜಾತ್ರೆಯ ಕಾರ್ಯಕ್ರಮದಲ್ಲಿ
C B. ಜಕ್ಕನ್ನವರ
ಬಸವರಾಜ ಪಟ್ಟಣ
ನಾಗಪ್ಪ ಜಾಕನಟ್ಟಿ ಮಹಾದೇವ ಸಿಂಗಾರಿ
ಬಸಲಿಂಗಪ್ಪ ನೀಲಪ್ಪನವರ
ಚಿದಾನಂದ ಈ.ಪೂಜೇರಿ
ಭೀಮಪ್ಪ ಜಕ್ಕಾನಟ್ಟಿ
ಗಂಗಪ್ಪ ದಾನಪ್ಪನವರ
ರುದ್ರಗೌಡ ಶಿ. ಪಾಟೀಲ
ಮಲ್ಲೇಶ ವಕ್ಕುಂದ
ರಾಜು ಮುತವಾಡ
ಅಣ್ಣಪ್ಪ ದೇಸಾಯಿ
ದೇವಸ್ಥಾನದ ಅರ್ಚಕರು :- ಅರುಣ್ ಕಲ್ಲಯ್ಯನವರ.
ಶ್ರೀ ಸಿದ್ಧಾರೂಢ ಯುವಕ ಮಂಡಳಿ, ಸ್ವಸಹಾಯ ಸಂಘಗಳ ಸದಸ್ಯರು, ಜಾತ್ರಾ ಸಮಿತಿಯವರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

Related Articles

Back to top button