Belagavi NewsBelgaum NewsCrimeKannada NewsKarnataka NewsLatestNational

*ಗೃಹ ಬಂಧನದಲ್ಲಿಟ್ಟು ಗಂಡನಿಂದ ಚಿತ್ರಹಿಂಸೆ: ಮಹಿಳೆಯನ್ನು ರಕ್ಷಿಸಿದ ಬೆಳಗಾವಿ ಅಕ್ಕಪಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಟಿಳಕವಾಡಿ ಪ್ರದೇಶದಲ್ಲಿ ಗಂಡ ತನ್ನ ಹೆಂಡತಿಯನ್ನು ಮನೆಯ ಬೆಡ್ ರೂಮ್ನಲ್ಲಿ ಲಾಕ್ ಮಾಡಿ ಮಾನಸಿಕ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೆಹಲಿಯಿಂದ, ಬಂದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ.

ಪೊಲೀಸ್ ಇನ್ಸಪೆಕ್ಟರ್ ಡಿ ಪಿ ನಿಂಬಾಳಕರ ಮಾರ್ಗದರ್ಶನದಲ್ಲಿ ಅಕ್ಕಪಡೆ ಘಟನಾ ಸ್ಥಳಕ್ಕೆ ಹೋಗಿ ಮನೆಯ ಬಾಗಿಲು ತೆರೆಯಿಸಿ ಮಹಿಳೆಯನ್ನು ಮತ್ತು ಅವರ ಎರಡು ಮಕ್ಕಳನ್ನು ರಕ್ಷಿಸಿ ಅಗತ್ಯ ವೈದ್ಯಕೀಯ ಚಿಕಿತ್ಸೆ, ಸುರಕ್ಷತೆ ಹಾಗೂ ಆಶ್ರಯ ಒದಗಿಸಲಾಗಿದೆ.

ರಕ್ಷಿಸಲ್ಪಟ್ಟ ಮಹಿಳೆ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಗಂಡನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. 

ಮುಂದಿನ ಸುರಕ್ಷತೆಯ ಸಲುವಾಗಿ ರಕ್ಷಿಸಲ್ಪಟ್ಟ ಮಹಿಳೆ ಮತ್ತು ಅವಳ ಮಕ್ಕಳಿಗೆ ಅವಳ ತವರೂರಾದ ದೆಹಲಿಗೆ ವಿಮಾನದ ಮುಖಾಂತರ ಕಳುಹಿಸಲಾಗಿದೆ.

Home add -Advt

ಅಕ್ಕಪಡೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಟ್ಟು 70 ಶಾಲಾ ಕಾಲೇಜುಗಳು; ಬಸ್‌ ನಿಲ್ದಾಣ, ರೇಲ್ವೆ ನಿಲ್ದಾಣ, ವಿಧ್ಯಾರ್ಥಿನಿಯರ ವಸತಿ ನಿಲಯಗಳು, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್, ಪಿಜಿ ಹಾಸ್ಟೆಲ್‌ಗಳು ಹಾಗೂ ಪ್ರಮುಖ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಒಟ್ಟು 91 ಮಹಿಳಾ ಜಾಗೃತಿ ಕಾರ್ಯಕ್ರಮಗಳನ್ನು ಕೈಕೊಂಡಿದೆ.

ಮಹಿಳೆಯರಿಗೆ ಸಂಭಂದಿಸಿದ ಕಾನೂನುಗಳು, ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಪೊಕ್ಸ್ ಕಾಯ್ದೆ, ಒಳ್ಳೆಯ ಸ್ಪರ್ಶ-ಕೆಟ್ಟ ಸ್ಪರ್ಶ, ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಗಳ ಬಗ್ಗೆ ಜಾಗೃತಿ ಮೂಡಿಸಿ ತುರ್ತು ಸಮಯದಲ್ಲಿ ಲಭ್ಯ ಇರುವ ಸಹಾಯವಾಣಿಗಳ ಬಗ್ಗೆ ಮಾಹಿತಿ  ನೀಡಲಾಗುತ್ತಿದೆ.

ಅಲ್ಲದೇ 2 ಜನ ಮಹಿಳೆಯರ ರಕ್ಷಣೆ ಮಾಡಿದ್ದು, 08 ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಹಾಗೂ 12 ಇವೆಂಟ್‌ಗಳನ್ನು ಸ್ವೀಕರಿಸಿ, ಹಾಜರಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಪ್ರಕರಣ 17, ಸಾರ್ವಜನಿಕರಿಗೆ ತೊಂದರೆ 28 ಪ್ರಕರಣ, ಚುಡಾಯಿಸುವುದು 1, ಹಿಂಬಾಲಿಸುವುದು 1, ಕೌಟಂಬಿಕ ಕಲಹ ಹೀಗೆ ಒಟ್ಟು 55 ಪ್ರಕರಣ ದಾಖಲಿಸಲಾಗಿದೆ. 

Related Articles

Back to top button