Belagavi NewsBelgaum NewsCrimeKannada NewsKarnataka News

*ಭೀಕರ ಅಪಘಾತ: ತಂದೆ ಎದುರೆ ನಾಲ್ಕು ವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಕ್ರಾಸ್ ಬಳಿ ಟಿಪ್ಪರ್ ಡಿಕ್ಕಿಯಾಗಿ ತಂದೆ ಕಣ್ಣೆದುರೇ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಬೂದನೂರ ಗ್ರಾಮದ ಪುಂಡಲಿಕ ಲಿಂಬಣ್ಣ ಗಿರೆಣ್ಣವರ (4) ಎಂಬ ಮಗು  ಸಾವನ್ನಪ್ಪಿದೆ. ತಂದೆ ಮಗ ಬೈಕ್ ಮೇಲೆ ಹೋಗುವಾಗ ಹಿಂಬದಿಯಿಂದ‌‌ ಟಿಪ್ಪರ್ ಡಿಕ್ಕಿ ಹೊಡೆದಿದೆ. 

ಅಪಘಾತದಲ್ಲಿ ತಂದೆಗೂ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ ವಶಕ್ಕೆ ಪಡೆದ ನೇಸರಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Home add -Advt

Related Articles

Back to top button