Kannada NewsKarnataka NewsLatest

*BREAKING: ಬಸವ ಜಯಮೃತ್ಯುಂಜಯ ಸ್ವಾಮೀಜಿ ಲೈಂಗಿಕ ಕಿರುಕುಳ ಕೇಸ್ ಗೆ ಬಿಗ್ ಟ್ವಿಸ್ಟ್*

ನನ್ನ ಹೆಸರಲ್ಲಿ ಬೇರೆ ಯಾರೋ ದೂರು ನೀಡಿದ್ದಾರೆ ಎಂದು ಉಲ್ಟಾ ಹೊಡೆದ ಮಹಿಳೆ


ಪ್ರಗತಿವಾಹಿನಿ ಸುದ್ದಿ: ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ, ಬೆತ್ತಲೆ ವಿಡಿಯೋ ಕಾಲ್ ಆರೋಪ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದಿದೆ.

ಸ್ವಾಮೀಜಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದ್ದ ಮಹಿಳೆ ಇದೀಗ ಉಲ್ಟಾ ಹೊಡೆದಿದ್ದಾರೆ. ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯವಾಗಿಲ್ಲ. ನನ್ನ ಹಾಗೂ ಸ್ವಾಮೀಜಿ ನಡುವಿನ ಸಂಬಂಧ ಭಕ್ತೆ ಹಾಗೂ ಗುರುವಿನ ಸಂಬಂಧ. ಗುರುಗಳು ನನ್ನ ಜೊತೆ ಅಸಭ್ಯವಾಗಿ ವರ್ತಿಸಿಲ್ಲ. ನನ್ನ ಹಾಗೂ ಸ್ವಾಮೀಜಿ ಮೇಲಿನ ಆರೋಪಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಸ್ವಾಮೀಜಿ ವಿರುದ್ಧ ಯಾವುದೇ ದೂರು ನೀಡಿಲ್ಲ. ನನ್ನ ಹೆಸರಲ್ಲಿ ಬೇರೆ ಯಾರೋ ದೂರು ನೀಡಿದ್ದಾರೆ. ಗುರುಗಳು ನನ್ನ ಜೊತೆ ಕೆಟ್ಟದಾಗಿ ಎಂದೂ ವರ್ತಿಸಿಲ್ಲ ಎಂದು ಮಹಿಳೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ನಾಲ್ಕು ದಿನಗಳಲ್ಲಿ ಎಲ್ಲವನ್ನೂ ವಿವರವಗಿ ತಿಳಿಸುತ್ತೇನೆ ಎಂದು ಮಹಿಳೆ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button