CrimeKannada NewsKarnataka News

*ಸಾಲ ಮಾಡಿ ಬೈಕ್ ಖರೀದಿಸಿದ ಯುವಕ: ಅದೇ ದಿನ ಬೈಕ್ ಎಗರಿಸಿದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಇಂದಿನ ಯುವಕರಿಗೆ ಬೈಕ್ ಕೊಳ್ಳುವುದೇ ಒಂದು ಕನಸು, ಆ ಕನಸು ನನಸು ಮಾಡಲು ಕಷ್ಟಪಟ್ಟು ಹಣ ಉಳಿಸಿ, ಸಾಲ ಮಾಡಿ ಬೈಕ್ ಖರೀದಿ ಮಾಡ್ತಾರಾ. ಹಾಗೇ ಇಲ್ಲಿಯೋಬ್ಬ ಯುವಕ ಬೈಕ್ ಖರೀದಿ ಮಾಡಿದ ದಿನವೇ ಕಳ್ಳರ ಪಾಲಾಗಿದೆ.

ಹೌದು..ಬೆಂಗಳೂರಿನ ನೆಲಮಂಗಲದ ಯುವಕನ ಕನಸಿನ ಬೈಕ್ ಖರೀದಿಸಿದ ಅದೇ ದಿನ ರಾತ್ರಿ ಕಳ್ಳತನವಾಗಿರುವ ಘಟನೆ ನಡೆದಿದೆ.

Home add -Advt

ಈ ಘಟನೆಯಿಂದ ಬೈಕ್ ಮಾಲೀಕ ಚಂದು ಈಗ ಕಂಗಾಲಾಗಿದ್ದಾರೆ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಮನೆಯ ಮುಂದೆ ಚಂದು ತನ್ನ ಕೆಟಿಎಂ ಬೈಕ್ ಅನ್ನು ಸುರಕ್ಷಿತವಾಗಿ ಲಾಕ್ ಮಾಡಿ ನಿಲ್ಲಿಸಿದ್ದರು. 

ಮಧ್ಯರಾತ್ರಿ ಬೇರೆ ಬೈಕ್‌ನಲ್ಲಿ ಬಂದ ಕಳ್ಳರ ಗ್ಯಾಂಗ್, ಯಾರ ಭಯವೂ ಇಲ್ಲದೆ ಕ್ಷಣಾರ್ಧದಲ್ಲಿ ಲಾಕ್ ಓಪನ್ ಮಾಡಿದೆ. ಅತ್ಯಂತ ಸುಲಭವಾಗಿ ಐಷಾರಾಮಿ ಬೈಕ್ ಅನ್ನು ಎಗರಿಸಿ ಪರಾರಿಯಾಗಿದೆ.

ಕಳ್ಳರು ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿರುವ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹ್ಯಾಂಡಲ್ ಲಾಕ್ ಇದ್ದರೂ ಸಹ ಕಳ್ಳರು ಅದನ್ನು ಮುರಿದು ಬೈಕ್ ಒಯ್ಯುತ್ತಿರುವ ವಿಧಾನ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Articles

Back to top button