ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಶಂಕಿತನ ಗುರುತು ಪತ್ತೆಯಾಗಿದೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾನೆ ಎಂಬ ಶಂಕಿತ 2018ರಲ್ಲಿ ಬೆಂಗಳೂರಿನಲ್ಲಿ ಹುಸಿ ಬಾಂಬ್ ಕರೆ ಮಾಡಿದ್ದ ವ್ಯಕ್ತಿಯೇ ಈ ಕೃತ್ಯದಲ್ಲಿ ಕೂಡ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹುಸಿ ಬಾಂಬ್ ಕರೆ ಮಾಡಿದ್ದ ಶಂಕಿತ ಆರೋಪಿ ಈಗಾಗಾಲೇ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಈ ವ್ಯಕ್ತಿಗೂ, ಮಂಗಳೂರಿನ ಬಾಂಬ್ ಪತ್ತೆ ಪ್ರಕರಣದ ಶಂಕಿತನಿಗೂ ಫೋಟೋದಲ್ಲಿ ಸಾಮ್ಯತೆ ಇದೆ ಎಂದು ಬೆಂಗಳೂರು ಪೊಲೀಸರಿಂದ ಮಂಗಳೂರು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಈ ನಡುವೆ ಬಾಂಬ್ ಇಟ್ಟ ಶಂಕಿತ ವ್ಯಕ್ತಿ ‘ರಾಜ್ಕುಮಾರ್’ ಬಸ್ನಲ್ಲಿ ಮಂಗಳೂರಿನಿಂದ ಕೆಂಜಾರು ಜಂಕ್ಷನ್ಗೆ ಬಂದು ಇಳಿದಿದ್ದ ಎಂದು ತಿಳಿದು ಬಂದಿದೆ. ಈ ಅಪರಿಚಿತ ವಿಧ್ವಂಸಕ ಕೃತ್ಯ ಎಸಗಲು 2 ಬ್ಯಾಗ್ ತಂದಿದ್ದ. ಕೆಂಜಾರು ಜಂಕ್ಷನ್ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ 1 ಬ್ಯಾಗ್ ಇಡಲು ಯತ್ನಿಸಿದ್ದ. ಸಂಕೀರ್ಣದ ಸೆಲೂನ್ ಅಂಗಡಿಯಲ್ಲೂ ಬಾಂಬ್ ಇಡಲು ಯತ್ನಿಸಿದ್ದ. ಆದರೆ ಬ್ಯಾಗ್ ಇಡಲು ಸೆಲೂನ್ ಮಾಲೀಕ ವಿರೋಧ ವ್ಯಕ್ತಪಡಿಸಿದ್ದ ಎಂದು ತಿಳಿದು ಬಂದಿದೆ.
ಏರ್ ಪೋರ್ಟ್ ಅಧಿಕಾರಿಗಳ ಮೇಲಿನ ಸೇಡಿಗೆ ಕೃತ್ಯ:
ಅಲ್ಲದೇ ಈ ಪ್ರಕರಣ ಸಂಬಂಧ ಇಂದು ಮಂಗಳೂರು ಏರ್ಪೋರ್ಟ್ ಮ್ಯಾನೇಜರ್ಗೆ ಉಡುಪಿಯ ಶಂಕಿತ ವ್ಯಕ್ತಿಯಿಂದ ಕರೆ ಬಂದಿದ್ದು, ಆತ ನಿಮ್ಮ ಅಧಿಕಾರಿಗಳಿಂದ ನಾನು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಏರ್ ಪೋರ್ಟ್ ನಲ್ಲಿ ಸೆಕ್ಯುರಿಟಿ ಕೆಲಸಕ್ಕಾಗಿ ಬಂದಿದ್ದವನಿಗೆ ಅಧಿಕಾರಿಗಳು ಕೆಲಾಸ ಸಿಗದಂತೆ ಮಾಡಿದ್ದಾರೆ.ಈ ಸೇಡು ತೀರಿಸಿಕೊಳ್ಳುತ್ತೇನೆ. ಅದಕ್ಕಾಗಿಯೇ ಏರ್ಪೋರ್ಟ್ ಬಳಿ ಬಾಂಬ್ ಇಟ್ಟಿದ್ದು. ಇನ್ನೂ 2 ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದನೆನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ