Belagavi NewsBelgaum NewsKannada NewsKarnataka NewsPolitics

*ಕುರ್ಚಿ ಮೇಲೆ ಕೂಡಿಸುವ ಅಧಿಕಾರ ಹೈಕಮಾಂಡ್‌ಗೆ ಇದೆ: ಸಚಿವ ಕೆ. ವೆಂಕಟೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 50 ರಷ್ಟು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸಚಿವ ಸ್ಥಾನ ಕೋಡಬೇಕು ಎಂಬುವುದು ಅವರವರ ಅಭಿಪ್ರಾಯ ಹೇಳಿದ್ದಾರೆ. ನಾನು ನನ್ನ ಅಭಿಪ್ರಾಯ ಹೇಳುತ್ತೇನೆ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಪಶುಸಂಗೋಪನೆ ಇಲಾಖೆ ಸಚಿವ ಕೆ ವೆಂಕಟೇಶ್ ಅವರು ಮಾಹಿತಿ ನೀಡಿದರು. 

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ  ಅಧಿಕಾರ ಹಂಚಿಕೆ ಹಾಗೂ ಸಚಿವ ಸಂಪುಟ ವಿಚಾರವಾಗಿ ಮಾತನಾಡಿದ ಅವರು, ಸಿಎಂ, ಡಿಸಿಎಂ ನಡುವೆ ಏನು ಮಾತುಕತೆ ಆಗಿದೆ ನಮಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಆಗಬೇಕು ಅನೋದು ತಪ್ಪಿಲ್ಲ‌. ರಾಜ್ಯದಲ್ಲಿ ಕುರ್ಚಿಯೂ ಖಾಲಿ ಇಲ್ಲ. ಅಧಿಕಾರ ಕೊಡೊದು ಹೈಕಮಾಂಡ್ ಬಿಟ್ಟಿದ್ದು. ಇಲ್ಲಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ. ನೀವೆ ತೀರ್ಮಾನ ತಗೊರಿ ಅಂದಾಗ ಅದು ಬೇರೆ ವಿಚಾರ ಆಗುತ್ತದೆ ಎಂದರು.

Home add -Advt

ಹೈಕಮಾಂಡ್ ಸಮಯ ಬಂದಾಗ ನಿರ್ಧಾರ ಮಾಡುತ್ತೆ ಈಗ ಸಮಯ ಬಂದಿದೆ ಅಂದುಕೊಂಡಿದ್ದೇನೆ. ಒಪ್ಪಂದ ಆಗಿದೆ ಅಂತಾ ಅವರು ಹೇಳುತ್ತಿದ್ದಾರೆ. ಏನು ಒಪ್ಪಂದ ಅಂತಾ ನಮಗೆ ಗೊತ್ತಿಲ್ಲ. ಅವರು ಏನು ಮಾತನಾಡಿಕೊಂಡಿದ್ದಾರೆ ನಮಗೇನು ಗೊತ್ತಿಲ್ಲ ಎಂದರು.

ರಾಜ್ಯದಲ್ಲಿ ಕುರ್ಚಿ ಖಾಲಿ ಇಲ್ವಾ ಎಂಬ ಅಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,  ಹೌದಲ್ವಾ ಖಾಲಿ ಇದ್ಯಾ ಈಗ

ಕುರ್ಚಿ ಖಾಲಿಯಾದ್ಮೆ ಯಾರು ಕುಳಿತುಕೊಳ್ಳುತ್ತಾರೆ ಆಮೇಲೆ ನೋಡೋಣ ಎಂದರು.

Related Articles

Back to top button