*ಬೆಳಗಾವಿ ನಗರದ ಎರಡು ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ನಿಯಮ ಜಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಎರಡು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ನಿಯಮ ಜಾರಿ ಮಾಡಲಾಗಿದೆ.
ಬೆಳಗಾವಿ ನಗರದ ರವಿವಾರ ಪೇಠ ಹಾಗೂ ಕಲ್ಮಠ ರಸ್ತೆ ಗಳಲ್ಲಿ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಅಂಗಡಿ ಮುಗ್ಗಟ್ಟುಗಳಿದ್ದು, ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟವಿದ್ದುದರಿಂದ ಸುಗಮ ಸಂಚಾರದಲ್ಲಿ ಅತೀವ ತೊಂದರೆ ಉಂಟಾಗುತ್ತಿರುತ್ತದೆ.
ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡಿದ್ದರಲ್ಲಿ 86% ಕ್ಕಿಂತ ಹೆಚ್ಚು ಜನರು ಏಕಮುಖ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಪಿಂಪಳ ಕಟ್ಟಾ ದಿಂದ ಕರ್ನಾಟಕ ಚೌಕ ಮಾರ್ಗವಾಗಿ ನರಗುಂದಕರ ಭಾವೆ ಚೌಕ ಕಡೆಗೆ ಪೂರ್ವದಿಂದ ಪಶ್ಚಿಮಕ್ಕೆ ಸಾಗಿದ ರವಿವಾರ ಪೇಠ ರಸ್ತೆ ಹಾಗೂ ನರಗುಂದಕರ ಭಾವೆ ಚೌಕ್ ದಿಂದ ಪಿಂಪಳ ಕಟ್ಟಾ ಕಡೆಗೆ ಪಶ್ಚಿಮ ದಿಂದ ಪೂರ್ವಕ್ಕೆ ಸಾಗಿದ ಕಲ್ಮಠ ರಸ್ತೆಗಳನಗಮು ಏಕಮುಖ ಸಂಚಾರ ಜಾರಿ ಮಾಡಲಾಗಿದೆ.
ರವಿವಾರ ಪೇಠ ಹಾಗೂ ಕಲ್ಮಠ ರಸ್ತೆ ಇವುಗಳನ್ನು “ಏಕಮುಖ ಸಂಚಾರ” ಅಂತ ಪರಿವರ್ತಿಸಲಾಗಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.


