CrimeKarnataka NewsLatest
*ಇಬ್ಬರು ಮಕ್ಕಳಿಗೆ ವಿಷ ನೀಡಿ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ*

ಪ್ರಗತಿವಾಹಿನಿ ಸುದ್ದಿ: ಗಂಡ-ಹೆಂಡತಿ ಜಗಳದಿಂದ ಮನನೊಂದ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಮತ್ತಿಕೆರೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪವಿತ್ರಾ ಎಂಬ ಮಹಿಳೆ ತನ್ನ 4 ವರ್ಷದ ನಿವೇದ್ ಹಾಗೂ 2 ವರ್ಷದ ನಿರ್ಮಲ್ ಎಂಬುವವರಿಗೆ ರಾತ್ರಿ ವಿಷ ಕೊಟ್ಟು ಕೊಲೆಗೈದಿದ್ದಾಳೆ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಬೆಳಿಗ್ಗೆ ವಿಷಯ ತಿಳಿದ ಪತಿ ಪ್ರಶಾಂತ್ ಅಸ್ವಸ್ಥರಾಗಿದ್ದ ಮಕ್ಕಳು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಪತ್ನಿ ಪವಿತ್ರಾ ಸ್ಥಿತಿಯೂ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.




