Kannada NewsKarnataka NewsLatestPolitics

*ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬದ ಮನಸ್ಸು ಗೆದ್ದವರು ಸಿಎಂ ಆಗುತ್ತಾರೆ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆ ಅವರು ಸಿಎಂ ಆಗುತ್ತಾರೆ. ಇದು ಪ್ರಜಾಪಭುತ್ವದ ವ್ಯವಸ್ಥೆಗೆ ನಾಚಿಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪರೀತ ಅಧಿಕಾರದ ಆಸೆಯಿಂದ ನಾಯಕರಲ್ಲಿ ತಿಕ್ಕಾಟ ಶುರುವಾಗಿದೆ. ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಮೂರು ಬಾರಿ ಗೆದ್ದಿದ್ದೇವೆ ನಮಗೆ ಸಚಿವ ಸ್ಥಾನ ಕೊಡಿ ಅಂತ ಕೇಳುತ್ತಾರೆ. ಹೊಸಬರು ತಮಗೂ ಸಚಿವ ಸ್ಥಾನ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಪಯತ್ನ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಬಹಳ ಹಿರಿಯವರು ಅವರು ತಮಗೆ ನ್ಯಾಯ ಸಮ್ಮತವಾಗಿ ಸಿಎಂ ಸ್ಥಾನ ಸಿಗಬೇಕು ಎಂಬ ನೋವು ಅವರ ಮನಸಿನಲ್ಲಿದೆ. ಅದಕ್ಕಾಗಿ ಆ ಭಾವನೆ ವ್ಯಕ್ತಪಡಿಸಿದ್ದಾರೆ ಎಂದರು.

ಕುಟುಂಬದ ಪಕ್ಷ
ಇಲ್ಲಿ ಪಶ್ನೆ ಏನೆಂದರೆ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ ಹೈಕಮಾಂಡ್ ಅಂದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅಂತಾರೆ, ಮಲ್ಲಿಕಾರ್ಜುನ ಖಗೆರ್ಯವರು ಹೈಕಮಾಂಡ್ ಅಂದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಂತಾರೆ ಇದೊಂದು ಕುಟುಂಬ ಆಧಾರಿತ ಪಕ್ಷ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆ ಅವರು ಸಿಎಂ ಆಗುತ್ತಾರೆ. ಇದು ಪ್ರಜಾಪಭುತ್ತದ ವ್ಯವಸ್ಥೆಗೆ ನಾಚಿಗೇಡಿನ ಸಂಗತಿ, ಬಹಳಷ್ಟು ಪ್ರಜಾಪಭುತ್ವದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಅಂತರಿಕ ಪ್ರಜಾಪಭುತ್ವವವನ್ನೇ ಸಂಪೂರ್ಣವಾಗಿ ಕೊಲೆ ಮಾಡಿರುವುದು ಎದ್ದು ಕಾಣಿಸುತ್ತದೆ ಎಂದು ಹೇಳಿದರು.

Home add -Advt

ಸರ್ಕಾರ ನಿಂತು ಹೋಗಿದೆ
ಸರ್ಕಾರದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವರನ್ನು ಮಾಡಿರುವ ಜನರು ರೋಸಿ ಹೋಗಿದ್ದಾರೆ. ಆಯ್ಕೆ ಮಾಡಿರುವ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಯಾವಾಗ ರಾಜಕೀಯ ತಿಕ್ಕಾಟ ಪ್ರಾರಂಭ ಆಗುತ್ತದೆ. ಸರ್ಕಾರ ಸಂಪೂರ್ಣ ಸ್ಥಗಿತ ಆಗಿದೆ. ಯಾವುದೇ ಕೆಲಸ ಆಗಿಲ್ಲ. ಸಿದ್ದರಾಮಯ್ಯ ಅವರ ಕಳೆದ ಬಜೆಟ್ ನಲ್ಲಿ ಒದಗಿಸಿದ್ದನ್ನು ಸುಮಾರು 14 ಸಾವಿರ ಕೋಟಿ ಬಳಕೆ ಮಾಡಿಲ್ಲ. ಅದರ ಹಿಂದಿನ ವರ್ಷವೂ ಕೂಡ ಸುಮಾರು 10 ಸಾವಿರ ಕೋಟಿ ಬಳಕೆ ಮಾಡಿಲ್ಲ. ರಾಜಕೀಯವಾಗಿ ತಿಕ್ಕಾಟ ಮಾಡಿದರೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ. ಸಿಎಂ ಒಂದು ಹೇಳಿದರೆ ಡಿಸಿಎಂ ಒಂದು ಹೇಳುತ್ತಾರೆ, ಜನರ ದೃಷ್ಟಿಯಿಂದ ಈ ಸರ್ಕಾರ ಸಂಪೂರ್ಣ ನಿಂತು ಹೋಗಿದೆ ಎಂದು ಆರೋಪಿಸಿದರು.

Related Articles

Back to top button